Site icon Vistara News

Koppala News: ಅಂಜನಾದ್ರಿ ಬೆಟ್ಟದಲ್ಲಿ ಕ್ಲೀನ್‌ ಡ್ರೈವ್‌; ಎಲ್ಲೆಂದರಲ್ಲಿ ಬಿಸಾಡಿದ ಸಾವಿರಾರು ವಾಟರ್‌ ಬಾಟಲ್‌ಗಳು: ಪರಿಸರ ನಾಶದ ಆತಂಕ

Garbage collected at Anjanadri Hill

ಗಂಗಾವತಿ: ಪ್ರಸಿದ್ಧ ಪ್ರಮುಖ ಧಾರ್ಮಿಕ ತಾಣವಾಗಿರುವ ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಶನಿವಾರ ಗಂಗಾವತಿಯ ಕಿಷ್ಕಿಂಧಾ (Kishkindha) ಯುವ ಚಾರಣ ಬಳಗದ ಸದಸ್ಯರು ಕ್ಲೀನ್‌ ಡ್ರೈವ್‌ (Clean drive) ಕಾರ್ಯ ಕೈಗೊಂಡರು.

ಅಂಜನಾದ್ರಿ ಬೆಟ್ಟಕ್ಕೆ ದರ್ಶನಕ್ಕೆ ಬರುವ ಭಕ್ತರು, ಯಾತ್ರಾರ್ಥಿಗಳು ಬಿಸಾಡುತ್ತಿರುವ ತ್ಯಾಜ್ಯದಿಂದಾಗಿ ಇದೀಗ ಇಡೀ ಬೆಟ್ಟದಲ್ಲಿ ತ್ಯಾಜ್ಯಗಳಿಂದ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರ ನಾಶವಾಗುತ್ತಿರುವ ಆತಂಕ ಎದುರಾಗಿದ್ದು, ಇದನ್ನು ಮನಗಂಡ ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಬೆಟ್ಟದ ಕಲ್ಲು ಸಂದಿಗಳಲ್ಲಿ, ಮೆಟ್ಟಿಲುಗಳ ಎರಡು ಕಡೆಗಳಲ್ಲಿ ಜನರು ಎಸೆದಿದ್ದ ನೀರಿನ ಬಾಟಲ್‌, ತ್ಯಾಜ್ಯಗಳ ಸಂಗ್ರಹಕ್ಕಾಗಿ `ಕ್ಲೀನ್ ಡ್ರೈವ್’ ಕಾರ್ಯ ಮಾಡಿದರು.

ಇದನ್ನೂ ಓದಿ: WTC Final 2023: ಭಾರತ-ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಹೈಲೆಟ್ಸ್​

200 ರಿಂದ 300 ಚೀಲದಷ್ಟು ಪ್ಲಾಸ್ಟಿಕ್ ತ್ಯಾಜ್ಯವಿರುವ ಸಾಧ್ಯತೆ

ಸುಮಾರು 40ಕ್ಕೂ ಹೆಚ್ಚು ಯವಕರು ಶನಿವಾರ ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ಇಳಿದೆವು. ಸುಮಾರು 50ಕ್ಕೂ ಹೆಚ್ಚು ಚೀಲಗಳಲ್ಲಿ ತ್ಯಾಜ್ಯ ಸಂಗ್ರಹಿಸಿದ್ದು, ಇನ್ನೂ 200 ರಿಂದ 300 ಚೀಲದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಇರುವ ಸಾಧ್ಯತೆ ಇದೆ ಎಂದು ಚಾರಣ ಬಳಗದ ಸದಸ್ಯ ಸಂತೋಷ್ ತಿಳಿಸಿದ್ದಾರೆ.

ಕುಡಿಯುವ ನೀರಿನ ಬಾಟಲ್‌ಗಳೇ ಅಧಿಕ

ಸಂಗ್ರಹಿಸಿದ ತ್ಯಾಜ್ಯದಲ್ಲಿ ಕುಡಿಯುವ ನೀರಿನ ಬಾಟಲ್‌ಗಳ ಪ್ರಮಾಣವೇ ಅಧಿಕವಾಗಿದೆ. ಜತೆಗೆ ತಂಬಾಕು ಪದಾರ್ಥಗಳ ತ್ಯಾಜ್ಯ, ತಿಂಡಿ-ತಿನಿಸುಗಳ ಪ್ಲಾಸ್ಟಿಕ್‌ ಪ್ಯಾಕೆಟ್‌ ಗಳನ್ನು ಬಳಸಿ ಎಲ್ಲೆಂದರಲ್ಲಿ ಎಸೆದು ಹೋಗಿದ್ದು, ಇದರಿಂದ ಬೆಟ್ಟದ ಸಹಜ ಸೌದರ್ಯ ನಾಶವಾಗುತ್ತದೆ ಎಂಬ ಕಾರಣಕ್ಕೆ ಗಂಗಾವತಿ, ಹೊಸಪೇಟೆ, ಕೊಪ್ಪಳ, ಕಂಪ್ಲಿ, ಕುಷ್ಟಗಿ, ಆನೆಗುಂದಿ, ಹನುಮನಹಳ್ಳಿಯಿಂದ ಬಂದಿದ್ದ ಸಮಾನ ಮನಸ್ಕ ಯುವಕರು ಸ್ವಚ್ಛತೆಗೆ ಮುಂದಾಗಿದ್ದೇವೆ ಎಂದು ಚಾರಣ ಬಳಗದ ಮತ್ತೊಬ್ಬ ಸದಸ್ಯ ತಿಳಿಸಿದರು.

ಅಂಜನಾದ್ರಿ ಬೆಟ್ಟದಲ್ಲಿ ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಕ್ಲೀನ್‌ ಡ್ರೈವ್‌ ಕಾರ್ಯ ಕೈಗೊಂಡರು.

ಇದನ್ನೂ ಓದಿ: ಎಟಿಎಸ್ ಭರ್ಜರಿ​ ಕಾರ್ಯಾಚರಣೆ; ಐಸಿಸ್​ ತರಬೇತಿಗಾಗಿ ಅಫ್ಘಾನ್​ಗೆ ಹೊರಟಿದ್ದ ಯುವತಿ, ಯುವಕರ ಬಂಧನ

ಮದ್ಯ ಬಾಟಲ್‌ಗಳು ಪತ್ತೆ

ಪ್ರಸಿದ್ಧ ಧಾರ್ಮಿಕ ತಾಣವಾದ ಅಂಜನಾದ್ರಿ ಬೆಟ್ಟದಲ್ಲಿ ಮದ್ಯ ಬಾಟಲಿಗಳು ಕೂಡ ಕಿಷ್ಕಿಂಧಾ ಯುವ ಚಾರಣ ಬಳಗ ಹಮ್ಮಿಕೊಂಡಿದ್ದ ಕ್ಲೀನ್‌ ಡ್ರೈವ್ ಸಂದರ್ಭದಲ್ಲಿ ಪತ್ತೆಯಾಗಿವೆ.

570 ಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಅಂಜನಾದ್ರಿ ಬೆಟ್ಟ ಏರುವಾಗ ದಣಿವಾರಿಸಿಕೊಳ್ಳಲು ಎಂದು ಹಲವರು ಕುಡಿಯುವ ನೀರಿನ ಬಾಟಲಿ, ಆಹಾರದ ಪೊಟ್ಟಣಗಳನ್ನು ತರುತ್ತಾರೆ. ಆಹಾರ ಸೇವಿಸಿದ ಬಳಿಕ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ತ್ಯಾಜ್ಯ ಸಂಗ್ರಹಕ್ಕೆ ಕಾರಣವಾಗಿದೆ.

ಇದನ್ನೂ ಓದಿ: WTC Final 2023: 44 ವರ್ಷಗಳ ಹಳೆಯ ದಾಖಲೆ ಪುಡಿಗಟ್ಟಿದ ರವೀಂದ್ರ ಜಡೇಜಾ

ಜನರಲ್ಲಿ ಜಾಗೃತಿ ಮೂಡಿಸಲಿ

ಭಕ್ತರು ಎಸೆದಿರುವ ಕುಡಿಯುವ ನೀರಿನ ಬಾಟಲಿಗಳ ಪ್ರಮಾಣವೇ ಸುಮಾರು ಹತ್ತು ಸಾವಿರಕ್ಕೂ ಅಧಿಕವಿದೆ. ತಾಜ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ದೇವಸ್ಥಾನದ ಆಡಳಿತ ಮಂಡಳಿ ಮತ್ತು ತಾಲೂಕು ಆಡಳಿತ ಮಾಡಬೇಕು ಎಂದು ಚಾರಣ ಬಳಗದ ಸದಸ್ಯರು ಆಗ್ರಹಿಸಿದ್ದಾರೆ.

Exit mobile version