Site icon Vistara News

Koppala News: ಹಳೇ ಬಾವಿಗಳ ಸ್ವಚ್ಛತೆ ಕೈಗೊಳ್ಳುವ ಮೂಲಕ ಗಮನ ಸೆಳೆದ ಯುವಕರು

cleaning old wells at gangavathi taluk

ಗಂಗಾವತಿ: ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ತಾಲೂಕಿನ ಢಣಾಪುರ ಗ್ರಾಮದಲ್ಲಿ ಯುವಕರ ತಂಡವೊಂದು ಹಳೇ ಬಾವಿಗಳ (Old wells) ಸ್ವಚ್ಛತೆಯನ್ನು (Cleanliness) ಕೈಗೊಳ್ಳುವ ಮೂಲಕ ಗಮನ ಸೆಳೆದಿದೆ.

ತಾಲೂಕಿನ ಢಣಾಪುರ ಗ್ರಾಮದ ಹಸಿರು ಬಳಗ ಮತ್ತು ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಎಂಬ ಯುವಕರ ತಂಡವೊಂದು ಗ್ರಾಮದಲ್ಲಿ ಈ ಹಿಂದೆ ಕುಡಿಯುವ ನೀರಿನ ಮುಖ್ಯ ಮೂಲಗಳಾಗಿದ್ದ ಮತ್ತು ದಶಕಗಳಷ್ಟು ಕಾಲ ಗ್ರಾಮದ ಜನರ ಕುಡಿಯುವ ನೀರಿನ ದಾಹ ನೀಗಿಸಿದ್ದ ಬಾವಿಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆ.

ಇದನ್ನೂ ಓದಿ: WTC Final 2023: ಧೋನಿಯಿಂದ ಕೀಪಿಂಗ್​ ಸಲಹೆ ಪಡೆದ ಶ್ರೀಕರ್​ ಭರತ್​

ಬಾವಿಯಲ್ಲಿನ ಕಸಕಡ್ಡಿಗಳನ್ನು ತೆಗೆದುಹಾಕಿ ಮತ್ತೆ ಬಾವಿಗೆ ನೈಸರ್ಗಿಕ ನೀರಿನ ಸೆಲೆಗಳನ್ನು ಹರಿಯುವಂತೆ ಮಾಡಲು ಗ್ರಾಮದ ಹಳೇ ಐದು ಬಾವಿಗಳ ಸ್ವಚ್ಛತೆಗೆ ಕೈ ಹಾಕುವ ಮೂಲಕ ಈ ತಂಡ ವಿಭಿನ್ನವಾಗಿ ಪರಿಸರ ದಿನಾಚರಣೆಗೆ ಇಳಿದಿದೆ.

ಗ್ರಾಮದ ದೇವಸ್ಥಾನ, ಸಾರ್ವಜನಿಕ ಸ್ಥಳದಲ್ಲಿನ ಐದು ಬಾವಿಗಳನ್ನು ಗುರುತಿಸಿರುವ ಈ ಹಸಿರು ಬಳಗ ಅವುಗಳ ಸ್ವಚ್ಛತೆಗೆ ಮುಂದಾಗಿದೆ. ಆರಂಭದಲ್ಲಿ ಗ್ರಾಮದ ಬಸವಣ್ಣ ದೇವರ ಗುಡಿಯ ಆವರಣದಲ್ಲಿರುವ ಬಾವಿಯಲ್ಲಿನ ಕಸ ನಿವಾರಣೆಗೆ ಮುಂದಾಗಿದೆ.

ಇದನ್ನೂ ಓದಿ: Road Accident: ಯಾದಗಿರಿಯಲ್ಲಿ ಭೀಕರ ಅಪಘಾತಕ್ಕೆ ಐವರ ಸಾವು, 13 ಮಂದಿಗೆ ಗಾಯ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ತಂಡದ ಸಂಚಾಲಕ ಮೊಹಮ್ಮದ್ ರಫಿ, ಈ ಹಿಂದೆ ಬಾವಿಗಳು ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿದ್ದವು. ಕಾಲಘಟ್ಟದಲ್ಲಿ ಬಾವಿಗೆ ಪರ್ಯಾಯವಾಗಿ ನೀರಿನ ಮೂಲಗಳು ಸುಲಭಕ್ಕೆ ಸಿಗುತ್ತಿರುವ ಕಾರಣಕ್ಕೆ ಇವು ಪಾಳು ಬಿದ್ದಿದ್ದವು. ಅಂತರ್ಜಲ ವೃದ್ಧಿಗೆ ಆಧಾರವಾಗಿದ್ದ ಇವುಗಳ ಪುನಶ್ಚೇತನಕ್ಕೆ ಇದೀಗ ಸ್ವಚ್ಛತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Exit mobile version