ಕುಷ್ಟಗಿ: ಮಕ್ಕಳ ಸಿಹಿ ತಿನಿಸು (Sweet food) ಇರುವ ಹೆಬ್ಬೆರೆಳು ಗಾತ್ರದ ಗಾಜಿನ ಬಾಟಲಿಯು ಗಂಟಲಲ್ಲಿ ಸಿಲುಕಿಕೊಂಡು ಮೂರು ವರ್ಷದ ಬಾಲಕ ಮೃತಪಟ್ಟ ಮನಕಲಕುವ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 8 ನೇ ವಾರ್ಡಿನ ಮದೀನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಎಂಬುವವರ ಮೂರು ವರ್ಷದ ಮಗ ಮಹ್ಮದ್ ಅಹ್ಮದ್ ರಬ್ಬಾನಿ ಬಾಗೇವಾಡಿ ಸಾವನ್ನಪ್ಪಿದವನು ಎಂದು ತಿಳಿದು ಬಂದಿದೆ.
ಬಾಲಕ ಮಹ್ಮದ್ ಅಹ್ಮದ್ ರಬ್ಬಾನಿ 1 ರುಪಾಯಿಯನ್ನು ತೆಗೆದುಕೊಂಡು ಹೋಗಿ ಅಂಗಡಿಯಲ್ಲಿ ಸಿಹಿ ತಿನಿಸುವುಳ್ಳ ಬಾಟಲಿ ತೆಗೆದುಕೊಂಡಿದ್ದಾನೆ. ಅದರ ಮುಚ್ಚಳವನ್ನು ಬಾಯಿಂದ ತೆಗೆಯಲು ಯತ್ನಿಸಿದ ಸಂದರ್ಭದಲ್ಲಿ ಬಾಟಲಿಯು ಗಂಟಲಿನ ಅನ್ನನಾಳದಲ್ಲಿ ಅಡ್ಡ ಸಿಲುಕಿ ಅಸ್ವಸ್ಥಗೊಂಡಿದ್ದ.
ಮಾರ್ಗ ಮಧ್ಯೆ ಬಾಲಕ ಸಾವು
ಈ ವಿಷಯ ಪಾಲಕರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.