ಗಂಗಾವತಿ: ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ (Anand Guruji) ಶನಿವಾರ ತಾಲೂಕಿನ ಪ್ರಮುಖ ಧಾರ್ಮಿಕ ಪುಣ್ಯಕ್ಷೇತ್ರ ಚಿಕ್ಕರಾಂಪೂರದ ಅಂಜನಾದ್ರಿ (Anjanadri) ಬೆಟ್ಟಕ್ಕೆ ಭೇಟಿ ನೀಡಿದರು. 578 ಮೆಟ್ಟಿಲುಗಳ ದಾರಿ ಬದಲಿಗೆ ವೇದ ಸಂಸ್ಕೃತಿ ಪಾಠಶಾಲೆಯ ಭಾಗದಿಂದ ಬೆಟ್ಟ ಏರಿದ ಗುರೂಜಿ, ಹನುಮಪ್ಪನ ಸನ್ನಿಧಾನದಲ್ಲಿ ವಿಶೇಷ ಅರ್ಚನೆ, ಪೂಜೆ ಸಲ್ಲಿಸಿದರು.
ಬೆಳಗ್ಗೆ ಹನ್ನೊಂದು ಗಂಟೆಗೆ ಆನಂದ್ ಗುರೂಜಿ ಬೆಟ್ಟಕ್ಕೆ ಆಗಮಿಸಲಿರುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ಮಾಹಿತಿ ಹಿನ್ನೆಲೆ ನೂರಾರು ಭಕ್ತರು ಗುರೂಜಿಯ ದರ್ಶನಕ್ಕೆ ಕಾಯ್ದಿದ್ದರು. ಆದರೆ ಮಧ್ಯಾಹ್ನ ನಾಲ್ಕು ಗಂಟೆಗೆ ಗುರೂಜಿ ಆಗಮಿಸಿದರು.
ಇದನ್ನೂ ಓದಿ: ವಾಯುಪಡೆ SDI ಬೆಂಗಳೂರಿನ ಮುಖ್ಯಸ್ಥರಾಗಿ ಕನ್ನಡಿಗ ಕೆ ಎನ್ ಸಂತೋಷ್ ನೇಮಕ; ಮಂಡ್ಯ ಕಾಲೇಜು ವಿದ್ಯಾರ್ಥಿ ಇವರು
ಮೊದಲಿಗೆ ಹನುಮಪ್ಪನ ಪಾದಗಟ್ಟೆಗೆ ಆಗಮಿಸಿದ ಆನಂದ್ ಗುರೂಜಿ ದಂಪತಿ ಪಾದಗಟ್ಟೆಯಲ್ಲಿ ಪೂಜೆ ಸಲ್ಲಿಸಿದರು.
ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಆನಂದ್ ಗುರೂಜಿ, ಹನುಮನ ಜನ್ಮಸ್ಥಾನ ಅತ್ಯಂತ ಪವಿತ್ರವಾಗಿದ್ದು, ಇದು ಕೇವಲ ಧಾರ್ಮಿಕ ಮಾತ್ರವಲ್ಲ, ನೈಸರ್ಗಿಕ, ಪೌರಾಣಿಕವಾಗಿಯೂ ಅತ್ಯಂತ ಹೆಚ್ಚು ಜಾಗೃತವಾಗಿರುವ ಕ್ಷೇತ್ರ ಎಂದರು.
ಅಂಜನಾದ್ರಿ ಬೆಟ್ಟದ ಮೇಲಿರುವ ಪ್ರಶಾಂತ ವಾತಾವರಣ ಸಿದ್ಧಿಗೆ ಹೇಳಿ ಮಾಡಿಸಿದ ಪ್ರಾಶಸ್ತ್ಯ ಸ್ಥಳವಾಗಿದ್ದು, ಸಾಧಕರನ್ನು ಸೆಳೆಯುತ್ತದೆ. ಮುಂದಿನ ದಿನಗಳಲ್ಲಿ ಇದು ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಅಗ್ರಪಂಕ್ತಿಗೆ ಸೇರಲಿದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: CM Siddaramaiah : ಮಕ್ಕಳ ತಲೆಯಲ್ಲಿ ತುಂಬಬೇಕಿರುವುದು ಧರ್ಮ ಅಲ್ಲ, ವೈಚಾರಿಕತೆ ಎಂದ ಸಿದ್ದರಾಮಯ್ಯ
ದೇವಸ್ಥಾನದಿಂದ ಆನಂದ್ ಗುರೂಜಿ ದಂಪತಿಗೆ ಸನ್ಮಾನಿಸಿ, ಗೌರವಿಸಲಾಯಿತು.