Site icon Vistara News

Koppala News: ಅಂಜನಾದ್ರಿ ಆಂಜನೇಯ ಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ; 27.71 ಲಕ್ಷ ಸಂಗ್ರಹ

anjanadri Anjaneya swamy temple hundi money counting

ಗಂಗಾವತಿ: ತಾಲೂಕಿನ ಪ್ರಸಿದ್ಧ ಅಂಜನಾದ್ರಿ ಬೆಟ್ಟದ (Anjanadri Hill) ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಶುಕ್ರವಾರ ನಡೆದಿದ್ದು, ಒಟ್ಟು 27.71 ಲಕ್ಷ ರೂ.‌ ಹುಂಡಿ ಕಾಣಿಕೆ ಹಣ ಸಂಗ್ರಹವಾಗಿದೆ.

ಹನುಮ‌ಮಾಲೆ ವಿಸರ್ಜನೆ ಕಾರ್ಯಕ್ರಮ ‌ನಡೆದ ಹಿನ್ನಲೆ‌ಯಲ್ಲಿ ಅಂಜನಾದ್ರಿ ದೇಗುಲದ ಹುಂಡಿಯು ಕೇವಲ 22 ದಿನಕ್ಕೆ ತುಂಬಿದ್ದು, ಬರೋಬ್ಬರಿ 27.71 ಲಕ್ಷ ರೂ.‌ಕಾಣಿಕೆ ಹಣ ಸಂಗ್ರಹವಾಗಿದೆ. ಪೊಲೀಸ್ ಬಂದೋಬಸ್ತ್‌ ಹಾಗೂ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ‌ ನಡೆಯಿತು.

ಇದನ್ನೂ ಓದಿ: Drought Relief: ರೈತರಿಗೆ 2 ಸಾವಿರ ರೂಪಾಯಿ ಬರ ಪರಿಹಾರ ಬಿಡುಗಡೆ

ಗಂಗಾವತಿ ತಹಸೀಲ್ದಾರ್ ವಿಶ್ವನಾಥ ಮುರಡಿ ಅವರ ನೇತೃತ್ವದಲ್ಲಿ ಬೆಳಗ್ಗೆ ಹುಂಡಿ ಎಣಿಕೆ ಕಾರ್ಯಕ್ಕೆ ಆರಂಭಿಸಲಾಯಿತು.‌ ಕಂದಾಯ ಇಲಾಖೆಯ ಸುಮಾರು 25ಕ್ಕೂ ಹೆಚ್ಚು ಸಿಬ್ಬಂದಿ ಸಂಜೆವರೆಗೆ ಹಣ ಏಣಿಕೆ ಮಾಡಿದ್ದಾರೆ.‌ ಒಟ್ಟು 27,71,761 ಲಕ್ಷ ರೂ ಜತೆಗೆ ಎರಡು ನೇಪಾಳ ದೇಶದ ನೋಟು ಮತ್ತು 3 ವಿದೇಶಿ ನಾಣ್ಯ ಸಂಗ್ರಹವಾಗಿವೆ.

ಇದನ್ನೂ ಓದಿ: Benefits Of Grapes: ಚಳಿಗಾಲದಲ್ಲಿ ದ್ರಾಕ್ಷಿ ತಿಂದರೆ ಎಷ್ಟೊಂದು ಲಾಭ!

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ, ಶಿರಸ್ತೇದಾರ ಮೈಬೂಬ ಅಲಿ, ಕಂದಾಯ ಇಲಾಖೆ ಸಿಬ್ಬಂದಿ ಕೃಷ್ಣವೇಣಿ, ನರ್ಮದಾ ಬಾಯಿ, ಮಂಜುನಾಥ ಹಿರೇಮಠ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version