ಗಂಗಾವತಿ: ತಾಲೂಕಿನ ಆನೆಗೊಂದಿ (Anegondi) ಗ್ರಾ.ಪಂ ವ್ಯಾಪ್ತಿಯ ಬಸವನದುರ್ಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (Government school) ಬಹುತೇಕ ಕೊಠಡಿಗಳು (Rooms) ದುಸ್ಥಿತಿಯಲ್ಲಿದ್ದು, ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Rain) ಶಾಲೆಯ ಚಾವಣಿ ಸೋರುತ್ತಿವೆ.
ಬಸವನದುರ್ಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಟ್ಟು 171 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಕೊಠಡಿಗಳ ಚಾವಣಿ ಸಿಮೆಂಟ್ ಉದುರಿ ಬಿದ್ದಿದ್ದು, ಮಳೆಯ ನೀರು ಶಾಲೆಯ ಕೊಠಡಿಯೊಳಗೆ ಜಿನುಗುತ್ತಿವೆ.
ಇದನ್ನೂ ಓದಿ: Byju Raveendran : ಹೂಡಿಕೆದಾರರ ಎದುರು ಕಣ್ಣೀರಿಟ್ಟ ಬೈಜೂಸ್ ರವೀಂದ್ರನ್
ಶಾಲಾ ಕೊಠಡಿಗಳು ಯಾವಾಗ ಕುಸಿದು ಬೀಳುತ್ತವೆಯೋ ಎಂಬ ಆತಂಕ ಹೆಚ್ಚಾಗಿದ್ದು, ಶಾಲೆಯಲ್ಲಿ ಇದ್ದಷ್ಟು ಹೊತ್ತು ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದು ಪಾಠ ಕೇಳುವ ದುಃಸ್ಥಿತಿ ಎದುರಾಗಿದೆ.
ತಮ್ಮ ಮಕ್ಕಳು ಶಿಕ್ಷಣ ಕಲಿಯಲಿ ಎಂದು ಶಾಲೆಗೆ ಕಳಿಸುತ್ತಿದ್ದೇವೆ. ಆದರೆ ಶಾಲೆಯ ಕೊಠಡಿ ಮತ್ತು ದುರಸ್ತಿಗೀಡಾಗಿರುವ ಕೊಠಡಿಗಳು ಅಪಾಯ ತಂದೊಡ್ಡುವ ರೀತಿಯಲ್ಲಿವೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IND vs WI ODI: ಭಾರತ-ವಿಂಡೀಸ್ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ, ಸಂಭಾವ್ಯ ತಂಡ
ದೂರು ನೀಡಿದರೂ ಸ್ಪಂದನೆಯಿಲ್ಲ
ಶಾಲೆಯ ಬಹುತೇಕ ಕೊಠಡಿಗಳು ದುರಸ್ತಿಗೀಡಾಗಿರುವ ಬಗ್ಗೆ ಆನೆಗೊಂದಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಶಿಕ್ಷಣ ಇಲಾಖೆಗೂ ದೂರು ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಸ್ಡಿಎಂಸಿ ಸದಸ್ಯ ಹೊನ್ನಪ್ಪ ನಾಯಕ್ ತಿಳಿಸಿದ್ದಾರೆ.