ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣಗಳಿಗೆ ಶನಿವಾರ ಅದರಲ್ಲೂ ಅಮವಾಸ್ಯೆ ಮತ್ತು ದಸರಾ ಹಬ್ಬದ (Dasara) ಅಂಗವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದರು. ಮುಖ್ಯವಾಗಿ ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ಭಕ್ತ ಸಾಗರ ಕಂಡುಬಂದಿತು.
ಅಂಜನಾದ್ರಿಯ ಆಂಜನೇಯನ ದರ್ಶನ ಪಡೆಯಲು ಶನಿವಾರ ಸುಮಾರು 30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಜನಜಂಗುಳಿ ಏರ್ಪಟ್ಟಿತ್ತು. ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಬೆಟ್ಟಕ್ಕೆ ಹೋಗುವ ಮೆಟ್ಟಿಲುಗಳಲ್ಲಿ ಜನ ಸಂದಣಿ ಹೆಚ್ಚಾಗಿತ್ತು.
ಇದನ್ನೂ ಓದಿ: Mysore dasara : ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ; ನಾಳೆ ಹಂಸಲೇಖರಿಂದ ಸಿಗಲಿದೆ ಚಾಲನೆ
ಹೀಗಾಗಿ ಕೆಲವರು ಚಿಕ್ಕರಾಂಪೂರದ ಹಿಂಭಾಗದಿಂದ ಬೆಟ್ಟ ಏರಿ ದೇವರ ದರ್ಶನ ಮಾಡಿದರು.
ಇದನ್ನೂ ಓದಿ: Money Guide: 250 ರೂ. ಉಳಿಸಿ; ನಿವೃತ್ತಿ ಬಳಿಕ ಪ್ರತಿ ತಿಂಗಳು 5 ಸಾವಿರ ರೂ. ಪೆನ್ಶನ್ ಗಳಿಸಿ
ಅಂಜನಾದ್ರಿ ದರ್ಶನ ಮಾಡಿಕೊಂಡ ಭಕ್ತಾಧಿಗಳು ಸಮೀಪದ ಋಷಿಮುಖ ಪರ್ವತ, ನವವೃಂದಾವನ, ಆನೆಗೊಂದಿ, ಪಂಪಾಸರೋವರ, ದುರ್ಗಾಬೆಟ್ಟದಲ್ಲಿನ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಹುಲಿಗಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.