ಗಂಗಾವತಿ: ಖಗೋಳ ವಿದ್ಯಮಾನಗಳೆಂದರೆ ಅದೊಂದು ಕೌತುಕದ ಖನಿಜ. ಇಸ್ರೋದ (ISRO) ವಿಜ್ಞಾನಿಗಳು ಶುಕ್ರವಾರ ಕೈಗೊಂಡ ಚಂದ್ರಯಾನ-3 (Chandrayaan-3) ರಾಕೆಟ್ ಉಡಾವಣೆಯ ಕಾರ್ಯಕ್ರಮವನ್ನು ನೂರಾರು ಮಕ್ಕಳು (Children) ನೇರ ಪ್ರಸಾರ ಕಾರ್ಯಕ್ರಮದಲ್ಲಿ ವೀಕ್ಷಿಸಿ ರಾಕೆಟ್ ಉಡಾವಣೆಯನ್ನು ಕಣ್ತುಂಬಿಕೊಂಡರು.
ಇಲ್ಲಿನ ಜಯನಗರದ ಬೈಪಾಸ್ ರಸ್ತೆಯಲ್ಲಿರುವ ಮಹಾನ್ ಕಿಡ್ಸ್ ಶಾಲೆಯಲ್ಲಿನ ನೂರಾರು ಮಕ್ಕಳಿಗೆ ಚಂದ್ರಯಾನ-3ರ ಉಡಾವಣೆಯ ದೃಶ್ಯಗಳನ್ನು ನೇರ ಪ್ರಸಾರವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: Viral News: ಈ ನಗರಕ್ಕೆ ಪ್ರವಾಸ ಹೋದರೆ, ಚಕ್ರವಿರುವ ಟ್ರಾಲಿ ಬ್ಯಾಗ್ ಹೊತ್ತೊಯ್ಯಬೇಡಿ!
ಶಾಲೆಯ ಆವರಣದಲ್ಲಿ ದೊಡ್ಡ ಟಿವಿಯನ್ನು ಅಳವಡಿಸಿ ಮಕ್ಕಳು ಚಂದ್ರಯಾನ-3ರ ರಾಕೆಟ್ ನಭಕ್ಕೆ ಚಿಮ್ಮುವ ದೃಶ್ಯಗಳನ್ನು ವೀಕ್ಷಣೆಯ ವ್ಯವಸ್ಥೆ ಮಾಡಲಾಗಿತ್ತು. ರಾಕೆಟ್ ಉಡಾವಣೆಯಾಗುತ್ತಿದ್ದಂತೆಯೇ ಮಕ್ಕಳು ಹರ್ಷೋದ್ಘಾರ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಶಾಲೆಯ ಮುಖ್ಯಸ್ಥ ನೇತ್ರಾಜ್, ಮಕ್ಕಳ ಶೈಕ್ಷಣಿಕ ಹಂತದಲ್ಲಿ ಅಪರೂಪಕ್ಕೆ ಒಮ್ಮೆ ಇಂತಹ ಅವಕಾಶಗಳು ಸಿಗುತ್ತವೆ. ಹೀಗಾಗಿ ಮಕ್ಕಳು ಈ ಚಂದ್ರಯಾನ-3ರ ಅಪರೂಪದ ದೃಶ್ಯಗಳನ್ನು ನೇರವಾಗಿ ವೀಕ್ಷಿಸಲಿ ಎಂಬ ಕಾರಣಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದರು.
ಇದನ್ನೂ ಓದಿ: Viral Video: ವಿಮಾನದಲ್ಲೇ ಭಿಕ್ಷೆ ಬೇಡಿದ ಪಾಕ್ ರಾಜಕಾರಣಿ; ನೆರೆ ರಾಷ್ಟ್ರಕ್ಕೆ ಇದೆಂಥಾ ದುಸ್ಥಿತಿ?
ಅಲ್ಲದೇ ರಾಕೆಟ್ ವ್ಯವಸ್ಥೆ ಹೇಗಿರುತ್ತದೆ? ವಿಜ್ಞಾನಿಗಳು ಹೇಗೆ ಕೆಲಸ ಮಾಡುತ್ತಾರೆ? ರಾಕೆಟ್, ಪೇ ಲೋಡರ್, ಲ್ಯಾಂಡರ್ ರೋವರ್‌ಗಳು ಹೇಗೆ ಕೆಲಸ ಮಾಡುತ್ತವೆ? ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಹೇಳಿದರು.