ಗಂಗಾವತಿ: ತಮ್ಮ ವಿವಿಧ ಬೇಡಿಕೆಗಳನ್ನು (Various demands) ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ಧಿ ಒಕ್ಕೂಟ ಕೊಪ್ಪಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ, ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ದೇವದಾಸಿಯರು ಪ್ರತಿಭಟನೆ (Protest) ನಡೆಸಿತು.
ಸಮಾಜದಲ್ಲಿ ದೇವದಾಸಿಯರು ಎಂದರೆ ಅತ್ಯಂತ ಶೋಷಣೆಗೆ ಒಳಗಾದ ಸಮುದಾಯವಾಗಿದೆ. ಈ ಸಮುದಾಯವನ್ನು ಮೇಲಕ್ಕೆ ಎತ್ತುವ ನಿಟ್ಟಿನಲ್ಲಿ ಈಗಾಗಲೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ ಕೆಲವರಿಗೆ ಪುನರ್ವಸತಿ ಕಲ್ಪಿಸಿದೆ. ಆದರೆ ಸಮೀಕ್ಷೆಯಿಂದ ಹೊರಗುಳಿದವರ ಬಗ್ಗೆ ಮರು ಸಮೀಕ್ಷೆ ಮಾಡಿಸಬೇಕು. ದೇವದಾಸಿ ಮಹಿಳೆಯರಿಗೆ ತಲಾ ಎರಡು ಎಕರೆ ಕೃಷಿ ಜಮೀನು, ಮಕ್ಕಳ ಉನ್ನತ ಶಿಕ್ಷಣಕ್ಕೆ ತಲಾ ಎರಡು ಲಕ್ಷ ಅನುದಾನ, ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೇ ತಲಾ ಐದು ಲಕ್ಷ ಮದುವೆಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: IND VS AUS: ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಸ್ಟೀವನ್ ಸ್ಮಿತ್ ನಾಯಕ
ಈ ವೇಳೆ ಕಾರ್ಮಿಕ ಮುಖಂಡ ತಿಮ್ಮಣ್ಣ ಎ.ಎಲ್ ಮಾತನಾಡಿ, ದೇವದಾಸಿಯರಿಗೆ ಮಾಸಿಕ ಈಗ ಸರ್ಕಾರ 1500 ಮಾಸಾಶನ ನೀಡುತ್ತಿದೆ. ಈಗಿನ ಕಾಲದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಕೂಡಲೆ ಅದನ್ನು ಐದು ಸಾವಿರಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಸಂಚಾಲಕಿ ರೇಣುಕಮ್ಮ ಮಾತನಾಡಿ, ದೇವದಾಸಿ ಮಹಿಳೆಯರ ಬಗ್ಗೆ ಮರು ಸಮೀಕ್ಷೆ ಮಾಡಬೇಕು, ತಲಾ ಎರಡು ಎಕರೆ ಜಮೀನು, ಮಕ್ಕಳಿಗೆ ಉನ್ನತ ಶಿಕ್ಷಣ, ಉದ್ಯೋಗದ ಭದ್ರತೆ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: Viral News : ವಿಶ್ವದಲ್ಲೇ ಅತಿ ಉದ್ದದ ನಾಲಿಗೆ ಹೊಂದಿರುವ ನಾಯಿ ಇದೇ ನೋಡಿ; ಅಬ್ಬಬ್ಬಾ ಎಷ್ಟೊಂದು ಉದ್ದವಿದೆ ಇದರ ನಾಲಿಗೆ!
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ಎ. ಹುಲುಗಪ್ಪ, ಗಂಗಮ್ಮ, ಶೇಖಮ್ಮ, ಮರಿಯಮ್ಮ ಹೊಸಳ್ಳಿ, ವನಜಾಕ್ಷಿ ಅಯೋಧ್ಯೆ, ಕರಿಯಮ್ಮ ಈಳಿಗೆನೂರು, ಮುದುಕಮ್ಮ, ಈರಮ್ಮ ಢಣಾಪುರ, ಮಾರೆಮ್ಮ, ಅಯ್ಯಮ್ಮ ಗುಂಡೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.