Site icon Vistara News

Koppala News: ಆ.12, 13ರಂದು ಜಿಲ್ಲಾ ಮಟ್ಟದ ಕಥಾ ಕಮ್ಮಟ ಶಿಬಿರ

writer Pawan Kumar Gundur pressmeet in Gangavati

ಗಂಗಾವತಿ: ಸಾಹಿತ್ಯ (Literature) ಲೋಕಕ್ಕೆ ಹೊಸ ಪ್ರತಿಭೆಗಳನ್ನು (New Talent) ಪರಿಚಯಿಸುವ ಮತ್ತು ಶೋಧಿಸುವ ಉದ್ದೇಶಕ್ಕೆ ನಗರದಲ್ಲಿ ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲಾ ಮಟ್ಟದ ಕಥಾ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ, ಬರಹಗಾರ ಪವನಕುಮಾರ ಗುಂಡೂರು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಕಥೆ, ಸಾಹಿತ್ಯದ ಬರವಣಿಗೆಯನ್ನು ರೂಢಿಸುವ ಉದ್ದೇಶಕ್ಕೆ ಕಥಾ ಕಮ್ಮಟವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಇದಕ್ಕಾಗಿ ಬೆಂಗಳೂರಿನ ವೀರಲೋಕ ಪ್ರಕಾಶನದ ಮಾಲೀಕ ಶ್ರೀನಿವಾಸ ಹಾಗೂ ಖ್ಯಾತ ಸಾಹಿತಿಗಳಾದ ಕಾ ತ ಚಿಕ್ಕಣ್ಣ, ಲಕ್ಷ್ಮಣ ಕೊಡಸೆ ನೇತೃತ್ವದಲ್ಲಿ ಕಥಾ ಕಮ್ಮಟ ರಾಜ್ಯಾದ್ಯಂತ ಆಯೋಜಿಸುವ ಉದ್ದೇಶಕ್ಕೆ ಈಗಾಗಲೆ ರಾಜ್ಯಮಟ್ಟದ ಸಭೆ ನಡೆಸಿದ್ದಾರೆ.

ಇದನ್ನೂ ಓದಿ: Poverty in Uttar Pradesh : ಉತ್ತರಪ್ರದೇಶಲ್ಲಿ 5 ವರ್ಷಗಳಲ್ಲಿ 3.4 ಕೋಟಿ ಮಂದಿ ಬಡತನದಿಂದ ಪಾರು

ಕೊಪ್ಪಳ ಜಿಲ್ಲೆಯಿಂದ ಸಂಚಾಲಕನಾಗಿ ತಾವು ಆಯ್ಕೆಯಾಗಿರುವುದನ್ನು ತಿಳಿಸಿರುವ ಅವರು, ಈ ದೇಶಿ ಕಥಾ ಕಮ್ಮಟವು ರಾಜ್ಯದಾದ್ಯಂತ ಜೂನ್‌ನಿಂದ ಜನವರಿವರೆಗೆ ನಡೆಯಲಿದೆ. ಕೊಪ್ಪಳ ಜಿಲ್ಲೆಯ ಕಥಾ ಕಮ್ಮಟವು ಆಗಸ್ಟ್ 12 ಮತ್ತು 13ರಂದು ಎರಡು ದಿನಗಳ ಕಾಲ ಅಮರ್‌ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಥಾ ಕಮ್ಮಟ ಶಿಬಿರಕ್ಕೆ ಆಯ್ಕೆಯಾಗುವ ಶಿಬಿರಾರ್ಥಿಗಳಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಮಾಡಲಾಗುವುದು. ಶಿಬಿರದಲ್ಲಿ ಕಥೆಗಳನ್ನು ಹೇಗೆ ಬರೆಯಬೇಕು, ಅದರ ಸ್ವರೂಪ, ಸಾಮಾಗ್ರಿ ಆಯ್ಕೆಯಂಥ ವಿಚಾರಗಳನ್ನು ಸಂಪನ್ಮೂಲ ವ್ಯಕ್ತಿಗಳು ಹೇಳಿ ಕೊಡಲಿದ್ದಾರೆ.

ಇದನ್ನೂ ಓದಿ: Anekal News : ವೀರಾಂಜನೇಯನಿಗೆ ಕೈ ಮುಗಿದು ದೇವಸ್ಥಾನದ ಹೊಸ್ತಿಲಿಗೆ ತಲೆ ಇಟ್ಟು ಪ್ರಾಣ ಬಿಟ್ಟ ಕೋತಿ!

ಕಥಾ ಕಮ್ಮಟದ ನಿರ್ದೇಶಕರಾಗಿ ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರು ಹಾಗೂ ಕೊಪ್ಪಳದ ಶರಣಪ್ಪ ಬಾಚಲಾಪೂರ ಆಯ್ಕೆಯಾಗಿದ್ದು, ಅವರು ಶಿಬಿರವನ್ನು ನಿರ್ವಹಿಸಲಿದ್ದಾರೆ, ಕೇವಲ 30 ಜನರಿಗೆ ಶಿಬಿರದಲ್ಲಿ ಭಾಗಿಯಾಗಲು ಅವಕಾಶವಿದೆ ಎಂದರು.

ಕಥಾ ಕಮ್ಮಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯ ರಾಯಚೂರಿನ ಚಿದಾನಂದ ಸಾಲಿ ಚಾಲನೆ ನೀಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಆಯ್ಕೆಯಾದ ಮಂಜುನಾಥ ನಾಯಕ್ ಚಳ್ಳೂರು ಸಮಾರೋಪದಲ್ಲಿ ಭಾಗಿಯಾಗಲಿದ್ದಾರೆ ಎಂದವರು ಹೇಳಿದರು.

ಇದನ್ನೂ ಓದಿ: Bike wheeling : ವೀಲಿಂಗ್‌ ಹುಚ್ಚಾಟಕ್ಕೆ ಮೈಸೂರಲ್ಲಿ ಬ್ರೇಕ್;‌ ನೋಡಿ Before – After!

ಆಸಕ್ತರು ಜುಲೈ 30ರೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ವಿವರಕ್ಕೆ (ಮೊ:9986621880, 9902475173, 9986666075) ಸಂಪರ್ಕಿಸಬಹುದು ಎಂದು ಪವನಕುಮಾರ ಗುಂಡೂರು ತಿಳಿಸಿದ್ದಾರೆ.

Exit mobile version