Site icon Vistara News

Koppala News: ನಿರುಪಯುಕ್ತ ತೆರೆದ ಕೊಳವೆ ಬಾವಿ ಮುಚ್ಚಿದರೆ ನಗದು ಬಹುಮಾನ: ವಿಭಿನ್ನವಾಗಿ ರೈತನಿಂದ ಜಾಗೃತಿ

gangavathi farmer Shivanna is creating awareness by offering cash rewards if useless open borewells are closed

ಗಂಗಾವತಿ: ನಿರುಪಯುಕ್ತ ತೆರೆದ ಕೊಳವೆ ಬಾವಿಗಳನ್ನು (Borewell) ಮುಚ್ಚುವ ರೈತರಿಗೆ ನಗದು ಬಹುಮಾನ ನೀಡುವ ಮೂಲಕ ರೈತರೊಬ್ಬರು, ವಿಭಿನ್ನವಾಗಿ ಜಾಗೃತಿ (awareness) ಮೂಡಿಸಲು (Koppala News) ಮುಂದಾಗಿದ್ದಾರೆ.

ಹೌದು, ಗಂಗಾವತಿ ನಗರದ ರೈತ ಶಿವಣ್ಣ ಅವರು, ನಿರುಪಯುಕ್ತ ತೆರೆದ ಕೊಳವೆ ಬಾವಿಗಳಿಂದ ಉಂಟಾಗುತ್ತಿರುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ: Koppala News: ಕಡೇಬಾಗಿಲು ಗ್ರಾಮದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

ಕೊಳವೆ ಬಾವಿ ತೋಡಿಸಿದ್ದರ ಬಗ್ಗೆ ದಾಖಲೆ ಮತ್ತು ನಿರುಪಯುಕ್ತವಾದ ಬಳಿಕ ಮುಚ್ಚಿದ ಬಗ್ಗೆ ಸೂಕ್ತ ಚಿತ್ರ, ವಿಡಿಯೋ ಸಮೇತ ಮಾಹಿತಿ ನೀಡಿದರೆ ಅಂತಹ ರೈತರಿಗೆ ನೇರವಾಗಿ ಐದುನೂರು ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

2018 ರಿಂದ ಜಾಗೃತಿ

ತೆರೆದ ನಿರುಪಯುಕ್ತ ಕೊಳವೆ ಬಾವಿಗಳ ಬಗ್ಗೆ 2018ರಿಂದ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿರುವ ರೈತ ಶಿವಣ್ಣ, ಅವುಗಳಿಂದ ಸಂಭವಿಸುತ್ತಿರುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸ್ವಂತ ಖರ್ಚಿನಿಂದ ಅಭಿಯಾನ ಕೈಗೊಂಡಿದ್ದಾರೆ.

ಇದನ್ನೂ ಓದಿ: Vastu Tips: ಆರ್ಥಿಕ ಪ್ರಗತಿಗೆ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ

ಕರಪತ್ರ ಪತ್ರ ಹಂಚುವುದು, ಜಾನಪದ ಕಲಾವಿದ ಶರಣಪ್ಪ ವಡಗೇರಿ ತಂಡದವರಿಂದ ಜಿಲ್ಲೆಯ ಕೊಪ್ಪಳ ಬಸ್‌ ನಿಲ್ದಾಣ, ಕೂಕನಪಳ್ಳಿ ಸಂತೆ, ಕುಷ್ಟಗಿ, ಯಲಬುರ್ಗಾ, ಕನಕಗಿರಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಬೀದಿ ನಾಟಕಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಚಿಕ್ಕ ಮಕ್ಕಳ ಪ್ರಾಣವನ್ನು ಉಳಿಸುವ ಮತ್ತು ಮಾನವೀಯತೆಯ ಉದ್ದೇಶಕ್ಕೆ ನಾನು ಈ ಕಾರ್ಯ ಮಾಡುತ್ತಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಗ್ರಾಮದ ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳಬಾರದು, ಇಂತಹ ದುರಂತಗಳು ಸಂಭವಿಸಬಾರದು ಎಂಬ ಕಾರಣಕ್ಕೆ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Money Guide : ತಿಂಗಳಿಗೆ 12 ಸಾವಿರಕ್ಕೂ ಹೆಚ್ಚು ಪಿಂಚಣಿ; ಎಲ್​​ ಐಸಿ ಪರಿಚಯಿಸಿದೆ ಹೊಸ ಯೋಜನೆ

ಕೊಪ್ಪಳ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಜಿಲ್ಲೆಯಲ್ಲಿರುವ ನಿರುಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಪತ್ತೆಹಚ್ಚಿ ಮುಚ್ಚಿಹಾಕಲು ಶಿಸ್ತುಬದ್ಧ ಕ್ರಮಗಳನ್ನು ಕೈಗೊಂಡು, ಲಚ್ಯಾಣ ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆ ಕೊಪ್ಪಳ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಶಿವಣ್ಣ ಜಿಲ್ಲಾಡಳಿತಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Exit mobile version