ಕುಷ್ಟಗಿ: ಆಕಸ್ಮಿಕವಾಗಿ ಬೆಂಕಿ (Fire accident) ಹೊತ್ತಿಕೊಂಡು ಮನೆಯೊಂದು ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ.
ಯರಗೇರಾ ಗ್ರಾಮದ ದೊಡ್ಡಪ್ಪ ಗಚ್ಚಿನಮನಿ ಎಂಬುವವರಿಗೆ ಸೇರಿದ ಮನೆ ಆಕಸ್ಮಿಕ ಬೆಂಕಿ ಘಟನೆಗೆ ಆಹುತಿಯಾಗಿದೆ. ಅದೃಷ್ಟವಶಾತ್ ಬೆಂಕಿ ಹೊತ್ತಿದಾಗ ಮನೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸಪಟ್ಟರೂ ಬೆಂಕಿ ನಂದಿಸಲು ಆಗಲಿಲ್ಲ.
ಬೆಂಕಿಯಲ್ಲಿ 4 ಲಕ್ಷ ರೂ. ನಗದು ಹಣ, ನಾಲ್ಕು ತೊಲೆ ಚಿನ್ನ ಸೇರಿದಂತೆ ಮನೆಯಲ್ಲಿದ್ದ ದವಸ ಧಾನ್ಯಗಳು ದಿನ ಬಳಕೆಯ ವಸ್ತುಳೆಲ್ಲವೂ ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎಂದು ಗ್ರಾಮದ ಮೂಲಗಳಿಂದ ತಿಳಿದು ಬಂದಿದೆ. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.