ಕೊಪ್ಪಳ: ಅಗ್ನಿ ಆಕಸ್ಮಿಕದಿಂದಾಗಿ ವಿವಿಧ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡು ವಸ್ತುಗಳು (Shops gutted in fire) ಆಹುತಿಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ನಗರದ ಕುಣಕೇರಿ ಕ್ರಾಸ್ನಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಕುಣಕೇರಿ ಕ್ರಾಸ್ ನಲ್ಲಿದ್ದ ವೆಲ್ಡಿಂಗ್ ಶಾಪ್, ಗ್ಯಾರೇಜ್, ಹೊಟೇಲ್ಗಳಿಗೆ ಅಗ್ನಿ ಆಕಸ್ಮಿಕದಿಂದ ಬೆಂಕಿ ಹೊತ್ತಿಕೊಂಡಿದೆ. ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಇದರಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಶಾಸಕ, ಮುಖಂಡರ ಭೇಟಿ, ಪರಿಶೀಲನೆ
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಜೆಡಿಎಸ್ ಅಭ್ಯರ್ಥಿ ಸಿ.ವಿ. ಚಂದ್ರಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಕಂದಾಯ ಹಾಗೂ ನಗರಸಭೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟವಾಗಿದ್ದು ನಷ್ಟ ಪರಿಹಾರ ನೀಡಬೇಕೆಂದು ಅಂಗಡಿ ಮಾಲೀಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : Fire Accident: ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಅಗ್ನಿ ಅವಘಡ; ಗೋಡೌನ್ನಲ್ಲಿ ಹೊತ್ತಿಉರಿದ ಸೀರಿಯಲ್ ಪ್ರಾಪರ್ಟಿಸ್