ಗಂಗಾವತಿ: ಶುದ್ಧ ಕುಡಿಯುವ ನೀರಿನ ಬಗ್ಗೆ ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ (Children) ಜಾಗೃತಿ ಮೂಡಿಸುವ ಉದ್ದೇಶಕ್ಕೆ ದಾನಿಯೊಬ್ಬರು ಸರ್ಕಾರಿ ಶಾಲೆಯ (Government school) ಮಕ್ಕಳಿಗೆ 55 ಕುಡಿಯುವ ನೀರಿನ ಬಾಟಲ್‌ಗಳನ್ನು (water bottle) ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿಯ ಹುಡೇಜಾಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅರಣ್ಯ ಇಲಾಖೆಯಲ್ಲಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮೌನೇಶ ಚೌಡಕಿ ಎಂಬುವವರು ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ನೀಡಿದ್ದಾರೆ.
ಇದನ್ನೂ ಓದಿ: Ind vs wi : ಮೂರನೇ ಪಂದ್ಯದ ಗೆಲುವಿಗೆ ಭಾರತ ತಂಡದ ರಣ ತಂತ್ರ ಏನು? ಇಲ್ಲಿದೆ ಮಾಹಿತಿ
ಸೋಮವಾರ ಶಾಲೆಯ ಮಕ್ಕಳಿಗೆ ದಾನಿ ಮೌನೇಶ ಪರವಾಗಿ ವಿತರಣೆ ಮಾಡಿದ ಅವರ ತಂದೆ ಶೇಖರಪ್ಪ ಚೌಡಕಿ, ಮೌನೇಶ ಹುಟ್ಟಿದ್ದು, ಪ್ರಾಥಮಿಕ ಶಿಕ್ಷಣ ಪಡೆದಿದ್ದು ಇದೇ ಗ್ರಾಮದಲ್ಲಿ. ಈ ಗ್ರಾಮದ ಸಮಸ್ಯೆ ಅವರ ಗಮನಕ್ಕಿವೆ.
ಅಶುದ್ಧ ಕುಡಿಯುವ ನೀರಿನಿಂದಲೇ ಇಂದು ಸಾಕಷ್ಟು ಕಾಯಿಲೆಗಳು ಬರುತ್ತಿವೆ. ಹೀಗಾಗಿ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂಬ ಕಾರಣಕ್ಕೆ ಮೌನೇಶ ಉಚಿತವಾಗಿ ಬಾಟಲಿಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Viral video: ಹಿಂಡು ತಪ್ಪಿಸಿಕೊಂಡ ಕಾಡಾನೆ ಮರಿ ಕರೆದರೆ ಏನು ಮಾಡುತ್ತೆ ನೋಡಿ!
ಗ್ರಾಮ ಪಂಚಾಯಿತಿ ಪಿಡಿಒ ಎನ್. ಸೂರ್ಯಕುಮಾರಿ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು. ಮುಖ್ಯವಾಗಿ ಕುಡಿಯುವ ನೀರನ್ನು ಕುದಿಸಿ, ಆರಿಸಿದ ಬಳಿಕ ಕುಡಿಯಲು ನೀಡಬೇಕು. ಇದರಿಂದ ನೀರಿನ ಮೂಲಕ ಹರಡಬಹುದಾದ ಸೋಂಕುಗಳನ್ನು ತಡೆಯಲು ಸಾಧ್ಯ ಎಂದರು.