Site icon Vistara News

Koppala News : ಹಾರ, ತುರಾಯಿ ಬದಲು ಸಚಿವ ಶಿವರಾಜ ತಂಗಡಗಿಗೆ ಉಪಯುಕ್ತ ಪುಸ್ತಕ

Book Tribute to Minister Shivraj Thangadagi

ಗಂಗಾವತಿ: ಹಾರ-ತುರಾಯಿ, ಶಾಲು-ಮಾಲೆಯಂಥ ಸನ್ಮಾನದ (Honoring) ಬದಲಿಗೆ ತಮ್ಮನ್ನು ತಮ್ಮ ಅಭಿಮಾನಿಗಳು, ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಪುಸ್ತಕಗಳನ್ನು (Books) ನೀಡುವ ಮೂಲಕ ಸನ್ಮಾನಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ನನಗೆ ಹಾರ ತುರಾಯಿ ಹಾಕಿ ಹಣ ವ್ಯರ್ಥ ಮಾಡಬೇಡಿ. ಬದಲಿಗೆ ನನ್ನನ್ನು ಸನ್ಮಾನಿಸುವ ಉದ್ದೇಶವಿದ್ದರೆ ಪ್ರಾಥಮಿಕ, ಪ್ರೌಢ ಶಾಲೆಯ ಮಕ್ಕಳಿಗೆ ಉಪಯೋಗವಾಗುವಂತಹ ಪುಸ್ತಕಗಳನ್ನು ಕೊಡಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Gold rate : ಚಿನ್ನದ ದರದಲ್ಲಿ 450 ರೂ. ಏರಿಕೆ, ಪ್ರಮುಖ ನಗರಗಳಲ್ಲಿ ಎಷ್ಟು? ಇಲ್ಲಿದೆ ಡಿಟೇಲ್ಸ್

ಇಂಗ್ಲೀಷ್-ಕನ್ನಡ ವ್ಯಾಕರಣ, ಶಬ್ದಕೋಶ, ಡಿಕ್ಷನರಿ, ಮಕ್ಕಳ ಜ್ಞಾನ ವಿಕಸನಕ್ಕೆ ಪ್ರೇರಕವಾಗಬಲ್ಲ, ನೈತಿಕ ಜ್ಞಾನ ವೃದ್ಧಿಸುವ ಪುಸ್ತಕ ನೀಡಬೇಕು. ಈ ಪುಸ್ತಕಗಳನ್ನು ಕನಕಗಿರಿ ಕ್ಷೇತ್ರದ ಸರಕಾರಿ ಶಾಲೆಯ ಮಕ್ಕಳ ಜ್ಞಾನಾರ್ಜನೆಗೆ ಬಳಕೆ ಮಾಡಲಾಗುವುದು ಎಂದು ತಂಗಡಗಿ ಮನವಿ ಮಾಡಿದ್ದಾರೆ.

ಸಚಿವ ತಂಗಡಗಿ ಅವರ ಮನವಿಗೆ ಸ್ಪಂದಿಸಿದ ಅವರ ಬೆಂಬಲಿಗರು, ದೊಡ್ಡ ಮಟ್ಟದಲ್ಲಿ ಪ್ರಾಥಮಿಕ ಮತ್ತು ಪೌಢಶಾಲಾ ಮಕ್ಕಳಿಗೆ ಉಪಯೋಗವಾಗುವ ವಿಜ್ಞಾನ, ಗಣಿತ, ಸಾಮಾನ್ಯಜ್ಞಾನ, ಕನ್ನಡ-ಇಂಗ್ಲೀಷ್ ವ್ಯಾಕರಣದಂತಹ ಪುಸ್ತಕಗಳನ್ನು ಕೊಡುತ್ತಿದ್ದಾರೆ.

ಇದನ್ನೂ ಓದಿ: Amruthadhare Kannada Serial: ಕಿರುತೆರೆಗೆ ರಾಜೇಶ್ ನಟರಂಗ ಗ್ರ್ಯಾಂಡ್‌ ಎಂಟ್ರಿ; ಒಲವಿನ ಅಮೃತಧಾರೆಯ ಹರಿವು ಆರಂಭ!

ಮಂತ್ರಿಯಂತ ಪದವಿ ಪಡೆದ ಸಂದರ್ಭದಲ್ಲಿ ಸಹಜವಾಗಿ ದೊಡ್ಡಮಟ್ಟದಲ್ಲಿ ಅಭಿಮಾನಿಗಳ ಹಾರತುರಾಯಿ ಹಾಕುತ್ತಾರೆ. ಈ ಹಾರ-ತುರಾಯಿಗೆ ವ್ಯರ್ಥವಾಗುವ ಹಣದಿಂದ ಮಕ್ಕಳ ಜ್ಞಾನ ವಿಕಸನ ಮಾಡಬಹುದು ಎಂಬ ಕಾರಣಕ್ಕೆ ಹಾರತುರಾಯಿ ನಿರಾಕರಿಸುವ ಮೂಲಕ ತಂಗಡಗಿ ಸರಳತೆ ಮೆರೆದಿದ್ದಾರೆ.

Exit mobile version