ಗಂಗಾವತಿ: ಇಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಮಾಜಿ ಸಚಿವ (Former minister) ಮಲ್ಲಿಕಾರ್ಜುನ ನಾಗಪ್ಪ ಅವರ ಬೆಣಕಲ್ ತೋಟದಲ್ಲಿ ಅರಣ್ಯ ಇಲಾಖೆ (Forest Department) ಇರಿಸಿದ್ದ ಬೋನಿಗೆ ಭಾನುವಾರ ಬೆಳಗಿನ ಜಾವ ಗಂಡು ಚಿರತೆಯೊಂದು (Male leopard) ಸೆರೆಯಾಗಿದೆ.
ವೆಂಕಟಗಿರಿ ಸೀಮೆಯ ಬೆಣಕಲ್ ಗ್ರಾಮದಲ್ಲಿ ಕೊಪ್ಪಳ ಗಂಗಾವತಿ ಮುಖ್ಯ ರಸ್ತೆಯ ಪಕ್ಕದಲ್ಲಿ ಬರುವ ತೋಟದಲ್ಲಿ ಈ ಚಿರತೆ ಸೆರೆಯಾಗಿದೆ.
ಇದನ್ನೂ ಓದಿ: ರೈಲು ಹೋಗುತ್ತಿದ್ದಾಗಲೇ ವಕ್ರಗೊಂಡ ಹಳಿ; ಸ್ವಲ್ಪದರಲ್ಲೇ ತಪ್ಪಿತು ದೊಡ್ಡ ದುರಂತ
ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ಬಗ್ಗೆ ಜನರಿಂದ ಮಾಹಿತಿ ದೊರೆತ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ನಾಲ್ಕು ದಿನಗಳ ಹಿಂದೆ ಬೋನು ಇಟ್ಟಿದ್ದರು. ಬೇಟೆ ಅರಸಿ ಬಂದಿದ್ದ ಚಿರತೆ ನಾಯಿಯ ಮೇಲೆ ದಾಳಿ ಮಾಡುವ ರಭಸದಲ್ಲಿ ಬೋನಿಗೆ ಬಿದ್ದು ಸೆರೆಯಾಗಿದೆ.
ಇದು ಒಂದೂವರೆ ವರ್ಷದ ಗಂಡು ಚಿರತೆಯಾಗಿದ್ದು ಸಂಪೂರ್ಣ ಆರೋಗ್ಯವಾಗಿದೆ. ತೋಟದಿಂದ ಬೋನು ಸಮೇತ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಾಂತರ ಮಾಡಿದ್ದಾರೆ.