ಗಂಗಾವತಿ: ಹೆಣ್ಣು ಮಗುವೆಂದು (Girl baby) ನವಜಾತ ಶಿಶುವನ್ನು (Newborn baby) ತಾಯಿಯೊಬ್ಬಳು ಮುಳ್ಳಿನ ಕಂಟಿಯಲ್ಲಿ ಎಸೆದು ಹೋಗಿರುವ ಘಟನೆಯು ತಾಲೂಕಿನ ಪ್ರಗತಿನಗರ ಗ್ರಾಮದಲ್ಲಿ ಜರುಗಿದೆ. ಗುರುವಾರ ಬೆಳಗಿನ ಜಾವ ನವಜಾತ ಶಿಶು ಅಳುವ ಧ್ವನಿಯು ಸ್ಥಳೀಯರಿಗೆ ಕೇಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Gold rate today : ಗ್ರಾಹಕರಿಗೆ ಸಿಹಿ ಸುದ್ದಿ, ಬಂಗಾರದ ದರದಲ್ಲಿ 430 ರೂ. ಇಳಿಕೆ
ಶಿಶುವಿನ ರಕ್ಷಣೆ
ಶಿಶು ಅಳುತ್ತಿರುವ ಧ್ವನಿ ಕೇಳಿದ ಸ್ಥಳೀಯರು ಮುಳ್ಳಿನ ಕಂಟಿಯಿಂದ ನವಜಾತ ಶಿಶುವನ್ನು ರಕ್ಷಣೆ ಮಾಡಿ ಆರೈಕೆ ಮಾಡಿದ್ದಾರೆ. ಗುರುವಾರ ಬೆಳಗಿನ ಜಾವ ಹೆರಿಗೆಯಾದ ಬಳಿಕ ಮಗುವನ್ನು ಎಸೆದು ಹೋಗಿರಬಹುದು ಎನ್ನಲಾಗಿದೆ.
ಶಿಶುವನ್ನು ರಕ್ಷಣೆ ಮಾಡಿದ ಸ್ಥಳೀಯರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯ ಪ್ರಗತಿನಗರ ಗ್ರಾಮದ ಗಂಗಮ್ಮ ಎನ್ನುವವರ ಮನೆಯಲ್ಲಿ ಮಗು ಆರೈಕೆ ಮಾಡಲಾಗುತ್ತಿದ್ದು, ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.