ಗಂಗಾವತಿ: ಜನರ ಮೇಲೆ ದಾಳಿ ಮಾಡಿ ಐದಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ ಹಾಗೂ ಗ್ರಾಮಸ್ಥರಲ್ಲಿ ಇನ್ನಿಲ್ಲದ ಭೀತಿ ಉಂಟು ಮಾಡಿದ್ದ ಕೋತಿಯೊಂದನ್ನು (Monkey) ಅರಣ್ಯ ಇಲಾಖೆ (Forest department) ಸಿಬ್ಬಂದಿ ಹರಸಾಹಸ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಸಣಾಪುರದಲ್ಲಿ ಕೋತಿಯೊಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜಗೌಡರ್ ಸೇರಿದಂತೆ ಗ್ರಾಮದ ಸುಮಾರು ಐದಾರು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಮಿಂಚಿನ ವೇಗದಲ್ಲಿ ಬಂದು ಜನರ ಮೇಲೆ ದಾಳಿ ಮಾಡುತ್ತಿದ್ದ ಕೋತಿಯು ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಓಡಿ ಹೋಗುತ್ತಿತ್ತು.
ಇದನ್ನೂ ಓದಿ: Mandya News: ತಂಗಿಯ ಮನೆಗೆ ಭೇಟಿ ಕೊಟ್ಟ ಬಳಿಕ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ವೈದ್ಯ
ಕೋತಿಯ ದಾಳಿಯಿಂದಾಗಿ ಗ್ರಾಮದಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರಲ್ಲಿ ಆತಂಕ ಉಂಟು ಮಾಡಿತ್ತು. ಕಳೆದ ಒಂದು ವಾರದಿಂದ ಕೋತಿಯ ಸೆರೆಗೆ ಹಲವು ಯತ್ನ ಮಾಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಶುಕ್ರವಾರ ಬೆಳಗ್ಗೆ ಅರಣ್ಯ ಇಲಾಖೆಯ ಚಾಲಕ ಹುಸೇನ್ ಸಾಬ್ ಸಾಕಷ್ಟು ಹರಸಾಹಸ ಮಾಡಿ ಬಲೆ ಹಾಕುವ ಮೂಲಕ ಜನರಿಗೆ ಉಪಟಳ ನೀಡುತ್ತಿದ್ದ ಕೋತಿಯನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Congress Guarantee: ಐದೂ ಗ್ಯಾರಂಟಿ ಜಾರಿ; ಆದರೆ ಈ ವರ್ಷ ಪೂರ್ತಿ ಕಾಯಿರಿ: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುರುಗಮ್ಮ, ಕೋತಿ ಉಪಟಳದಿಂದಾಗಿ ಗ್ರಾಮದ ಜನ ಬೇಸತ್ತು ಹೋಗಿದ್ದರು. ಈ ಬಗ್ಗೆ ತಹಸೀಲ್ದಾರ್ ಮಂಜುನಾಥ ವಿಶೇಷ ಕಾಳಜಿ ವಹಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ಮೂಲಕ ಕೋತಿಯ ಸೆರೆಗೆ ನೆರವು ನೀಡಿದ್ದಾರೆ ಎಂದು ತಿಳಿಸಿದ್ದಾರೆ.