ಗಂಗಾವತಿ: ಒಂದು ಕಡೆ ಪರವಾನಗಿ ಪಡೆದು ಮತ್ತೊಂದು ಕಡೆ ಕ್ರಿಮಿನಾಶಕ (Pesticides) ವನ್ನು ಮಾರಾಟ ಮಾಡುವ ಮೂಲಕ ಕೃಷಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಕೀಟನಾಶಕ ಔಷಧಿಗಳನ್ನು ಜಪ್ತಿ ಮಾಡಿಕೊಂಡಿರುವ ಘಟನೆ ಗಂಗಾವತಿ ನಗರದಲ್ಲಿ ಜರುಗಿದೆ.
ನಗರದ ಸಿಬಿಎಸ್ ಗಂಜ್ ಪ್ರದೇಶದಲ್ಲಿರುವ ಮಹೇಶ ಏಜೆನ್ಸಿ ಎಂಬ ಅಂಗಡಿಯಲ್ಲಿ ಅನಧಿಕೃತ ಕೀಟನಾಶಕ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆಯ ಜಾರಿ ದಳ ವಿಭಾಗದ ಸಹಾಯಕ ನಿರ್ದೇಶಕ ನಿಂಗಪ್ಪ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಇದನ್ನೂ ಓದಿ: IPL 2023: ಮುಂಬೈ,ಗುಜರಾತ್ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ; ಪಂದ್ಯ ರದ್ದಾದರೆ ಯಾರು ಫೈನಲ್ಗೆ?
ಈ ಸಂದರ್ಭದಲ್ಲಿ ಅಂಗಡಿಯಲ್ಲಿ 1.98 ಲಕ್ಷ ರೂಪಾಯಿ ಮೌಲ್ಯದ 232 ಲೀಟರ್ ಕೀಟನಾಶಕವನ್ನು ಜಪ್ತಿ ಮಾಡಿದ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಂಗಪ್ಪ, ಕೀಟನಾಶಕ ಮಾರಾಟ ಮಾಡಲು ಜಂಗಮರ ಕಲ್ಗುಡಿಯಲ್ಲಿ ಅನುಮತಿ ನೀಡಲಾಗಿತ್ತು. ಆದರೆ ಗಂಗಾವತಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಕೀಟನಾಶಕ ಕಾಯ್ದೆ 1986 ನಿಯಮ ಉಲ್ಲಂಘನೆಯಾಗಿದ್ದು, ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 7th Pay Commission : ವೇತನ ಆಯೋಗದ ಮಹತ್ವದ ಸಭೆ; ನೌಕರರ ಬೇಡಿಕೆ ಮಂಡಿಸಿದ ರಾಜ್ಯ ಸರ್ಕಾರಿ ನೌಕರರ ಸಂಘ
ದಾಳಿಯಲ್ಲಿ ಕೃಷಿ ಇಲಾಖೆಯ ಜಾರಿ ದಳ ವಿಭಾಗದ ಅಧಿಕಾರಿ ಕುಮಾರಸ್ವಾಮಿ ಪಾಲ್ಗೊಂಡಿದ್ದರು.