Site icon Vistara News

Koppala News: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹನುಮಾನ್ ತಾಂಡವ್ ಮಂತ್ರ ಪಠಣ

Hanuman tandav mantra chanting in pampasarovar near gangavathi

ಗಂಗಾವತಿ: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಜ.22 ರಂದು ಶ್ರೀರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯುವ ಹಿನ್ನಲೆಯಲ್ಲಿ ಶ್ರೀರಾಮನ ಪರಮ ಭಕ್ತ ಹನುಮಂತನ ಭೇಟಿ ಸ್ಥಳದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಹನುಮಾನ್ ತಾಂಡವ್ ಮಂತ್ರ (Hanuman Tandav Mantra) ಪಠಣ ಮಾಡಲಾಯಿತು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪೌರಾಣಿಕ ಪ್ರಸಿದ್ಧ ಪಂಪಾ ಸರೋವರದಲ್ಲಿ ಸಾವಿರಾರು ತಾಯಂದಿರು ಸಾಮೂಹಿಕವಾಗಿ ಮಂತ್ರ ಪಠಣ ಮಾಡಿದರು.

ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶದಿಂದ ಆಗಮಿಸಿದ್ದ ಸಾವಿರಾರು ಮಾತೃಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀರಾಮ ತನ್ನ ಪರಮ ಭಕ್ತ ಹನುಮಂತನನ್ನು ಭೇಟಿ ಮಾಡಿದ ಸ್ಥಳ ಎಂಬ ಪೌರಾಣಿಕ ಹಿನ್ನಲೆಯ ಪಂಪಾ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ: Boycott Maldives: `ಭಾರತವೇ ನಮ್ಮ 911′ ಎಂದ ಮಾಲ್ಡೀವ್ಸ್ ಮಾಜಿ ಸಚಿವೆ

ಸಾವಿರಕ್ಕೂ ಹೆಚ್ಚು ಮಾತೃಗಳು ಏಕಕಾಲಕ್ಕೆ ಹನುಮಾನ್ ತಾಂಡವ್ ಪಠಣ ಮಾಡಿದರು. ಪಂಪಾ ಸರೋವರದ ಕಲ್ಯಾಣಿಯಲ್ಲಿ ಸುತ್ತುವರಿದು ಶಿಸ್ತಿನಿಂದ ಕುಳಿತ ಮಹಿಳೆಯರು, ದೀಪ ಹಚ್ಚಿ, ಶ್ರದ್ಧಾ ಭಕ್ತಿಯಿಂದ ಮಂತ್ರ ಪಠಿಸಿದರು.

ಪೌಂಡೇಶನ್ ಫಾರ್ ಹೋಲಿಸ್ಟಿಕ್ ಡೆವಲಪ್ಮೆಂಟ್ ಸಂಸ್ಥೆ ಮಂತ್ರ ಪಠಣ ಕಾರ್ಯಕ್ರಮ ಆಯೋಜಿಸಿತ್ತು. ಕರ್ನಾಟಕದ 150ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಜೊತೆ ಭಾಗಿಯಾಗಿದ್ದರು.

Exit mobile version