ಗಂಗಾವತಿ: ಹಿಟ್ ಆ್ಯಂಡ್ ರನ್ (Hit and Run) ಪ್ರಕರಣದಲ್ಲಿ ತೀವ್ರಗಾಯಗೊಂಡು ರಸ್ತೆಯ ಮೇಲೆ ನರಳಾಡುತ್ತಿದ್ದ ಯುವಕನೊಬ್ಬನ ರಕ್ಷಣೆಗೆ (Rescued) ಧಾವಿಸಿದ ಗಂಗಾವತಿಯ ಶಾಸಕ ಜಿ. ಜನಾರ್ದನರೆಡ್ಡಿ, (G. Janardhana Reddy) ಆತನನ್ನು ಸಕಾಲಕ್ಕೆ ತಮ್ಮದೇ ವಾಹನದಲ್ಲಿ ಚಿಕಿತ್ಸೆಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ.
ಗಂಗಾವತಿ ತಾಲೂಕಿನ ಮರಳಿ ಟೋಲ್ಗೇಟ್ ಸಮೀಪ ಈ ಘಟನೆ ನಡೆಸಿದ್ದು ತೀವ್ರಗಾಯಗೊಂಡು ಆಸರೆ ಬಯಸುತ್ತಿದ್ದ ಯುವಕನನ್ನು ಮುಸಲಾಪುರ ಗ್ರಾಮದ ಸುರೇಶ ಎಂದು ಗುರುತಿಸಲಾಗಿದೆ. ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಇದನ್ನೂ ಓದಿ: GST Collection : ಮೇನಲ್ಲಿ 1.57 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಕರ್ನಾಟಕದಲ್ಲಿ ಎಷ್ಟು?
ಯುವಕ ಬೈಕ್‌ನಲ್ಲಿ ಶ್ರೀರಾಮನಗರದಿಂದ ಗಂಗಾವತಿಗೆ ಬರುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆಯತಪ್ಪಿ ನೆಲಕ್ಕೆ ಉರುಳಿದ ಯುವಕನಿಗೆ ತಲೆಗೆ ಹಾಗೂ ಮೈ-ಕೈಗೆ ತೀವ್ರ ಪೆಟ್ಟಾಗಿದೆ.
ಇದನ್ನೂ ಓದಿ: Delhi Murder: ಸಾಹಿಲ್‌ನಿಂದ ಹತಳಾದ ಸಾಕ್ಷಿ ನನ್ನ ಗರ್ಲ್‌ಫ್ರೆಂಡ್ ಎಂದ ಮತ್ತೊಬ್ಬ ಯುವಕ; ಕೊಲೆಗೆ ಮತ್ತೊಂದು ಟ್ವಿಸ್ಟ್
ಇದೇ ಸಂದರ್ಭದಲ್ಲಿ ಖಾಸಗಿ ಸಮಾರಂಭದಲ್ಲಿ ಭಾಗಿಯಾಗಲು ಗಂಗಾವತಿಯಿಂದ ಕಾರಟಗಿಯತ್ತ ಹೊರಟಿದ್ದ ಶಾಸಕ ಜಿ. ಜನಾರ್ದನ ರೆಡ್ಡಿ ಕೂಡಲೇ ತಮ್ಮ ವಾಹನ ನಿಲ್ಲಿಸಿ ನೆರವಿಗಾಗಿ ರಸ್ತೆಯ ಮೇಲೆ ಹೊರಳಾಡುತ್ತಿದ್ದ. ಯುವಕನ ರಕ್ಷಣೆಗೆ ಧಾವಿಸಿದ್ದಾರೆ. ತಮ್ಮದೇ ಬೆಂಗಾವಲು ವಾಹನದಲ್ಲಿ ಯುವಕನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.