Site icon Vistara News

Hornbill Bird: ಗಂಗಾವತಿಯಲ್ಲಿ ‘ಹಾರ್ನ್‌ಬಿಲ್’ ಪಕ್ಷಿ ಪ್ರತ್ಯಕ್ಷ

Hornbill bird sighting in Gangavathi

ಗಂಗಾವತಿ: ಪಶ್ಚಿಮಘಟ್ಟದಂತ ಮಲೆನಾಡು ಮತ್ತು ಸಮುದ್ರ ತೀರಗಳನ್ನು ಹೊಂದಿರುವ ಪ್ರದೇಶದಲ್ಲಿ ಹೆಚ್ಚಾಗಿ ಕಾಣ ಸಿಗುವ ಹಾರ್ನ್‌ಬಿಲ್ (Hornbill Bird) ಎಂಬ ಪಕ್ಷಿಗಳು ಇದೀಗ ಬಯಲು ಸೀಮೆಯಲ್ಲಿ ಅಪರೂಪಕ್ಕೆ ಪ್ರತ್ಯಕ್ಷವಾಗಿ ಗಮನ ಸೆಳೆದಿವೆ.

ಇಲ್ಲಿನ ಜಯನಗರದ ಬೈಪಾಸ್ ರಸ್ತೆಯಲ್ಲಿರುವ ಹಸಿರು ಹೊಲ-ಗಿಡ ಮರಗಳ ಮಧ್ಯೆ ಇರುವ ನಿರ್ಮಾಣ ಹಂತದ ಲೇಔಟ್‌ನಲ್ಲಿ ಹಾರ್ನ್‌ಬಿಲ್, ಮಂಗಟ್ಟೆ ಹಕ್ಕಿ ಎಂದು ಸ್ಥಳೀಯ ಭಾಷೆಯಲ್ಲಿ ಕರೆಯುವ ಹಕ್ಕಿಯು ವಾಯು ವಿಹಾರಿಗಳಿಗೆ ಕಾಣ ಸಿಕ್ಕಿದೆ.

ಇದನ್ನೂ ಓದಿ: Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

ಸಾಮಾನ್ಯವಾಗಿ ಇದನ್ನು ಪಕ್ಷಿತಜ್ಞರು ಗ್ರೇಟ್ ಹಾರ್ನ್‌ಬಿಲ್, ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಮತ್ತು ಗ್ರೇಟ್ ಫೈಡ್ ಹಾರ್ನ್‌ಬಿಲ್ ಎಂದು ಗುರುತಿಸುತ್ತಾರೆ. ಭಾರತ, ಮಲೇಶಿಯಾ, ಸುಮಾತ್ರ, ಇಂಡೋನೇಷ್ಯಾ, ಮಲಯ ದ್ವೀಪದ ಅರಣ್ಯಗಳಲ್ಲಿ ಕಾಣ ಸಿಕ್ಕುತ್ತವೆ.

ಇವುಗಳಲ್ಲಿ ಹಲವು ಪ್ರಭೇದಗಳಿದ್ದು, ಆಕರ್ಷಕ ಬಣ್ಣ, ವಿನ್ಯಾಸ, ಗಾತ್ರದಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ ಇವು ಆಹಾರವನ್ನು ಹುಡುಕಿಕೊಂಡು ನೂರಾರು ಕಿಲೋ ಮೀಟರ್ ದೂರದವರೆಗೂ ಪ್ರಯಾಣ ಮಾಡುತ್ತವೆ. ಹಣ್ಣಿನ ಮರಗಳನ್ನು ಹುಡುಕಿಕೊಂಡು ಹೋಗುತ್ತವೆ.

ಇದನ್ನೂ ಓದಿ: World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು!

ಬಯಲುಸೀಮೆಯಲ್ಲಿ ಅಪರೂಪ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹವ್ಯಾಸಿ ಪಕ್ಷಿತಜ್ಞ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯೋಜನಾಧಿಕಾರಿ ಪ್ರವೀಣ್, ಸಹಜವಾಗಿ ಹಾರ್ನ್‌ಬಿಲ್ ಪಕ್ಷಿಗಳು ಕಾರವಾರದ ದಾಂಡೇಲಿಯಲ್ಲಿ ಸಂತಾನೋತ್ಪತ್ತಿಗೆಂದು ಬರುತ್ತವೆ. ಈ ಮುಂಗಾರು ಕಾಲ ಈ ಪಕ್ಷಿಗಳಿಗೆ ಸಂತಾನೋತ್ಪತಿ ಕಾಲ. ಹೀಗೆ ಬಂದಿರುವ ಪಕ್ಷಿಗಳಲ್ಲಿ ಕೆಲವು ಗಂಗಾವತಿಯಂತ ಬಯಲು ಸೀಮೆಗೆ ಆಹಾರ ಹುಡಿಕಿಕೊಂಡು ಬಂದಿರುವ ಸಾಧ್ಯತೆ ಇದೆ. ಈ ಪಕ್ಷಿಗಳು ಭಾರತದಲ್ಲಿ ಕಾಣಸಿಗುತ್ತವೆ. ಆದರೆ ಬಯಲು ಸೀಮೆಯಂತ ಪ್ರದೇಶದಲ್ಲಿ ಅಪರೂಪ ಎಂದು ಪ್ರವೀಣ್ ತಿಳಿಸಿದ್ದಾರೆ.

Exit mobile version