Site icon Vistara News

Koppala News: ಅಂಜನಾದ್ರಿ ದೇಗುಲದ ಹುಂಡಿ ಎಣಿಕೆ; 35 ದಿನಕ್ಕೆ 25.27 ಲಕ್ಷ ಸಂಗ್ರಹ

Hundi count of Anjanadri temple 25 27 lakh collection per 35 days

ಗಂಗಾವತಿ: ತಾಲೂಕಿನ ಚಿಕ್ಕರಾಂಪುರದಲ್ಲಿರುವ ಅಂಜನಾದ್ರಿ ದೇಗುಲದಲ್ಲಿನ (Anjanadri temple) ಭಕ್ತರು ಕಾಣಿಕೆ ರೂಪದಲ್ಲಿ ಸಲ್ಲಿಸಿರುವ ಹುಂಡಿ ಹಣದ ಎಣಿಕೆ (Hundi count) ಕಾರ್ಯ ಮಂಗಳವಾರ ನಡೆದಿದ್ದು, 35 ದಿನಕ್ಕೆ ಒಟ್ಟು 25.27 ಲಕ್ಷ ರೂ. ಹಣ ಸಂಗ್ರಹವಾಗಿದೆ.

ಅಂಜನಾದ್ರಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯೂ ಆಗಿರುವ ಗಂಗಾವತಿ ತಹಸೀಲ್ದಾರ್ ಮಂಜುನಾಥ್‌ ಅವರ ನೇತೃತ್ವದಲ್ಲಿ ಹಣದ ಎಣಿಕೆ ಕಾರ್ಯ ನಡೆಯಿತು. ಜುಲೈ 4 ರಿಂದ ಆಗಸ್ಟ್ 8 ರ ವರೆಗಿನ ಒಟ್ಟು 35 ದಿನದಲ್ಲಿ ಕಾಣಿಕೆ ಪೆಟ್ಟಿಗೆಯಲ್ಲಿ 25.27 ಲಕ್ಷ ಮೊತ್ತದ ಹಣ ಸಂಗ್ರಹವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Vijayanagara News: ಶಿವಪುರ ಗ್ರಾಮದಲ್ಲಿ ಕಾಡುಹಂದಿಗಳ ದಾಳಿ; ಮೆಕ್ಕೆಜೋಳ ಬೆಳೆ ನಾಶ

ಕಳೆದ ಜುಲೈ 4 ರಂದು ಹುಂಡಿ ಎಣಿಕೆ ಮಾಡಿದ್ದಾಗ 26.57 ಲಕ್ಷ ಮೊತ್ತದ ಕಾಣಿಕೆ ನಿಧಿ ಅಂಜನಾದ್ರಿಯಲ್ಲಿ ಸಂಗ್ರಹವಾಗಿತ್ತು.

ಇದನ್ನೂ ಓದಿ: Koppala News: ಮಂಗಗಳ ವಾಸಸ್ಥಾನವಾದ ಕುಕನೂರಿನ ತಹಸೀಲ್ದಾರ್ ಕಾರ್ಯಾಲಯ!

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್‌ ವಿ.ಎಚ್. ಹೊರಪೇಟೆ, ಶಿರಸ್ತೇದಾರ್‌ ರವಿಕುಮಾರ್‌ ನಾಯಕವಾಡಿ, ಕೃಷ್ಣವೇಣಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

Exit mobile version