Site icon Vistara News

Koppala News: ಗಂಗಾವತಿಯಲ್ಲಿ ಜಯಲಕ್ಷ್ಮಿ, ಶ್ರೀರಂಗನಾಥ ಸ್ವಾಮಿ ದೇಗುಲಗಳ ಹುಂಡಿ ಎಣಿಕೆ; 3.92 ಲಕ್ಷ ರೂ. ಸಂಗ್ರಹ

Hundi Count of Sriranganath Temple at Angegondi

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಆನೆಗೊಂದಿ ಭಾಗದಲ್ಲಿರುವ ಪಂಪಾಸರೋವರದ ಜಯಲಕ್ಷ್ಮಿ ದೇವಸ್ಥಾನ (Jayalakshmi Temple) ಹಾಗೂ ಆನೆಗೊಂದಿಯ (Anegondi) ಶ್ರೀರಂಗನಾಥ ಸ್ವಾಮಿ ದೇಗುಲದ (Sriranganath Temple) ಕಾಣಿಕೆ ಹುಂಡಿ (Hundi) ಎಣಿಕೆ ನಡೆದಿದ್ದು, ಒಟ್ಟು 3.92 ಮೊತ್ತದ ನಗದು ಸಂಗ್ರಹವಾಗಿದೆ.

ಕಂದಾಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆಯ ಸಂದರ್ಭದಲ್ಲಿ ಚಿಕ್ಕರಾಂಪುರ-ಪಂಪಾಸರೋವರದಲ್ಲಿರುವ ಜಯಲಕ್ಷ್ಮಿ ದೇವಸ್ಥಾನದಲ್ಲಿ ರೂ 2.61 ಲಕ್ಷ ಮೊತ್ತದ ಹಣ ಸಂಗ್ರಹವಾಗಿದೆ.

ಇದನ್ನೂ ಓದಿ: Viral Video: ಧೈರ್ಯ ಇದ್ರೆ ಮಾತ್ರ ಈ ವಿಡಿಯೋ ನೋಡಿ! ಎನ್‌ಸಿಸಿ ಕೆಡೆಟ್‌ನ ಅಮಾನವೀಯ ಕೃತ್ಯ

ಆನೆಗೊಂದಿ ಗ್ರಾಮದ ಆರಾಧ್ಯ ದೈವ ಶ್ರೀರಂಗನಾಥ ದೇಗುಲದಲ್ಲಿ ರೂ 1.31 ಲಕ್ಷ ಮೊತ್ತದ ನಗದು ಹಣ ಸಂಗ್ರಹವಾಗಿದೆ. ಎರಡು ದೇಗಲಗಳಿಂದ ಹತ್ತು ತಿಂಗಳಲ್ಲಿ ಒಟ್ಟು 3.92 ಲಕ್ಷ ಮೊತ್ತದ ನಗದು ಹಣ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version