Site icon Vistara News

Koppala News : ಗಂಗಾವತಿಯ ನೂರಾರು ಮಹಿಳೆಯರು, ವಿದ್ಯಾರ್ಥಿನಿಯರಿಗಿಲ್ಲ `ಶಕ್ತಿ’ ಯೋಜನೆಯ ಭಾಗ್ಯ

Gangavathi bus stand

ಗಂಗಾವತಿ: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯಡಿ (Shakthi) ರಾಜ್ಯಾದ್ಯಂತ ಮಹಿಳೆಯರು (Womens) ಉಚಿತವಾಗಿ ಪ್ರಯಾಣಿಸಬಹುದಾಗಿದೆ (Free bus travel). ಆದರೆ ಗಂಗಾವತಿಯ ನೂರಾರು ಮಹಿಳೆಯರು, ವಿದ್ಯಾರ್ಥಿಯರು ಈ ಮಹತ್ವಕಾಂಕ್ಷಿ ಯೋಜನೆಯಿಂದ ವಂಚಿತವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.

ನಗರದಿಂದ ನಿತ್ಯ ಗಂಗಾವತಿಯಿಂದ ಬಳ್ಳಾರಿಗೆ ಹೋಗುವ ನೂರಾರು ವಿದ್ಯಾರ್ಥಿಯರು, ಉದ್ಯೋಗಸ್ಥ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ಇದನ್ನೂ ಓದಿ: Chandrayana 3: ಚಂದ್ರಯಾನ-3ಕ್ಕೆ ದಿನಾಂಕ ಫಿಕ್ಸ್​ ಎಂದ ಇಸ್ರೋ ಮುಖ್ಯಸ್ಥ; ಯಾವಾಗ?

ತಾಂತ್ರಿಕ ಕಾರಣಕ್ಕೆ ವಂಚಿತ

ನಗರದಿಂದ ನಿತ್ಯ ಬಳ್ಳಾರಿಗೆ ಬೆಳಗ್ಗೆ 6ರಿಂದ 8.30ರವರೆಗೆ ಬಿಐಟಿಎಂ ಕಾಲೇಜಿನ ವಿದ್ಯಾರ್ಥಿಯರು, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮಹಿಳಾ ಉದ್ಯೋಗಿಗಳು ಸೇರಿದಂತೆ ನಾನಾ ಇಲಾಖೆಯ ಮಹಿಳಾ ನೌಕರರು ಬಳ್ಳಾರಿಗೆ ಹೋಗುತ್ತಿದ್ದಾರೆ. ಆದರೆ ಶಕ್ತಿ ಯೋಜನೆ ಜಾರಿಯಾದ ಬಳಿಕವೂ ನಿತ್ಯ ಈಗಲೂ ಹಣ ನೀಡಿಯೇ ಪ್ರಯಾಣಿಸಬೇಕಾಗಿದೆ.

ಅಂತಾರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಕ್ಕೆ ಅವಕಾಶವಿಲ್ಲ

ಬೆಳಗ್ಗೆ 5.30ರಿಂದ 8 ಗಂಟೆಯೆವರೆಗೆ ಗಂಗಾವತಿಯಿಂದ ಬಳ್ಳಾರಿ ಮಾರ್ಗವಾಗಿ ಹೋಗುವ ಎಲ್ಲಾ ಸಾರಿಗೆ ಸಂಸ್ಥೆಯ ವಾಹನಗಳು ನೆರೆಯ ರಾಜ್ಯಕ್ಕೆ ಹೋಗುತ್ತಿವೆ. ಹೀಗಾಗಿ ಈ ವಾಹನಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಇಲ್ಲದಂತಾಗಿದೆ. ಗಂಗಾವತಿಯಿಂದ ಬಳ್ಳಾರಿಯತ್ತ ಬೆಳಗ್ಗೆ 5.30 ಕ್ಕೆ ಗಂಗಾವತಿ-ಬಳ್ಳಾರಿ ಮಧ್ಯೆ ಸಾರಿಗೆ ಇಲಾಖೆಗಳ ವಾಹನ ಸೇವೆ ಆರಂಭವಾಗುತ್ತಿದೆ.

ಬೆಳಗ್ಗೆ 5.30ಕ್ಕೆ ಬಳ್ಳಾರಿ ಮಾರ್ಗವಾಗಿ ಮಂತ್ರಾಲಯ, ಬಳಿಕ 6.15ಕ್ಕೆ ಬಳ್ಳಾರಿ ಮಾರ್ಗವಾಗಿ ಅನಂತಪುರ, ಬೆಳಗ್ಗೆ ಏಳು ಗಂಟೆಗೆ ಬಳ್ಳಾರಿ ಮಾರ್ಗವಾಗಿ ಮತ್ತೊಂದು ಅನಂತಪುರಕ್ಕೆ ಹೋಗುವ ವಾಹನ ಸೇವೆ ಇದೆ.

ಇದನ್ನೂ ಓದಿ: BJP Karnataka: ಪ್ರತಾಪ್‌ ಸಿಂಹ ʼತುರಿಕೆʼ ಮಾತಿನಿಂದ ಬಿಜೆಪಿಯಲ್ಲಿ ಕಸಿವಿಸಿ: ಜಾರಿಕೊಂಡ ಸಿ.ಟಿ. ರವಿ, ಪೂಜಾರಿ!

ಬಳಿಕೆ 7.15 ಕ್ಕೆ ಗಂಗಾವತಿ-ಬಳ್ಳಾರಿ ಮಾರ್ಗವಾಗಿ ಸಂಚರಿಸುವ ಕೊಪ್ಪಳ-ಮಂತ್ರಾಲಯ ವಾಹನ ಇದೆ. ವಾಹನ ಸೇವೆ ಇದೆಯಾದರೂ ಮಹಿಳೆಯರಿಗೆ ಈ ವಾಹನದಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲದಂತಾಗಿದೆ.

ಮಧ್ಯಾಹ್ನ ಒಂದು ಗಂಟೆಯ ನಂತರ ಗಂಗಾವತಿಯತ್ತ ಬರುವ ಬಳ್ಳಾರಿ ಡಿಪೋದ ವಾಹನಗಳ ಸಂಚಾರ ಸ್ಥಗಿತವಾಗುತ್ತದೆ. ಬಳಿಕ ಅನಿವಾರ್ಯವಾಗಿ ಸಂಜೆಯೂ ಹಣ ನೀಡಿಯೇ ಪ್ರಯಾಣಿಸಬೇಕಾಗಿದೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ಅವಕಾಶ ಕಲ್ಪಿಸಿ

ಗಂಗಾವತಿಯಿಂದ ಬಳ್ಳಾರಿಗೆ ರಾಜ್ಯದೊಳಗೆ ಸಂಚರಿಸುವ ವಾಹನ ಸೇವೆ ಆರಂಭವಾಗುವುದು 8.30ರ ಬಳಿಕ. ಗಂಗಾವತಿಯಿಂದ ಬಳ್ಳಾರಿಗೆ ಸಾರಿಗೆ ವಾಹನದಲ್ಲಿ ಹೋಗಲು ಕನಿಷ್ಟ ಎರಡು ಗಂಟೆ ಸಮಯ ಹಿಡಿಯುತ್ತದೆ. 8.30ರ ಬಳಿಕ ಗಂಗಾವತಿಯಿಂದ ಹೊರಟರೆ ನಿಗಧಿತ ಅವಧಿಯೊಳಗೆ ಕಾಲೇಜು ಅಥವಾ ಇಲಾಖೆಯಲ್ಲಿ ಕೆಲಸಕ್ಕೆ ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯರು ಬೆಳಗ್ಗೆ 8 ಗಂಟೆಗೂ ಮುನ್ನವೇ ಗಂಗಾವತಿಯಿಂದ ತೆರಳುತ್ತಿದ್ದು ಅನಿವಾರ್ಯವಾಗಿ ಹಣಕೊಟ್ಟೇ ಪ್ರಯಾಣ ಮಾಡಬೇಕಾಗಿದೆ.

ಇದನ್ನೂ ಓದಿ: Dr Raj Cup: ವಿದೇಶಿ ಮೈದಾನಗಳಲ್ಲಿ ಡಾ. ರಾಜ್ ಕಪ್ ಸಂಭ್ರಮ! ಸಿನಿ ತಾರೆಯರ ಭರ್ಜರಿ ಸಿದ್ಧತೆ

ಅಂತರ್‌ರಾಜ್ಯ ಸಂಚಾರ ಮಾಡುವ ರಾಜ್ಯದ ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವೇ ಬೆಳಗ್ಗೆ ಆರು ಗಂಟೆಯಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಗಂಗಾವತಿ-ಬಳ್ಳಾರಿ ಮಧ್ಯ ವಾಹನ ಸೇವೆ ಆರಂಭಿಸಬೇಕು. ಬಳ್ಳಾರಿಯಿಂದ ಪುನಃ ಸಂಜೆ ನಾಲ್ಕು ಗಂಟೆಯಿಂದ ಎಂಟು ಗಂಟೆವರೆಗೂ ವಾಹನ ಸೇವೆ ಕಲ್ಪಿಸಬೇಕು ಎಂದು ಮಹಿಳಾ ಉದ್ಯೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿನೀಯರು ಒತ್ತಾಯಿಸಿದ್ದಾರೆ.

Exit mobile version