Site icon Vistara News

Koppala News: ಅಕ್ರಮ ಜಾನುವಾರು ಸಾಗಾಟ: 9 ಜನ ಆರೋಪಿಗಳ ಬಂಧನ

Illegal Cattle Trafficking 9 Accused Arrested in gangavathi

ಗಂಗಾವತಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ (Illegal Cattle Trafficking) ಖಚಿತ ಮಾಹಿತಿ ಮೇಗೆ ಗಂಗಾವತಿ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿ, 16 ಜಾನುವಾರುಗಳನ್ನು ರಕ್ಷಣೆ ಮಾಡಿ, 9 ಆರೋಪಿಗಳನ್ನು ಬಂಧಿಸಿರುವ ಘಟನೆ (Koppala News) ಜರುಗಿದೆ.

ಇದನ್ನೂ ಓದಿ: Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

ಘಟನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ಮಂಡಲದ ಸೀನಹೊತೂರಿನ ಚಾಲಕ ರಘುವೀರ್, ತುಮಿಳುಬೀಡು ಗ್ರಾಮದ ಶೇಖಣ್ಣ ತಹಸೀಲ್ದಾರ್, ಚಂದ್ರಣ್ಣ ತಹಸೀಲ್ದಾರ್, ರಾಮಾಂಜನೇಯ, ಹಂಪಾ ಗ್ರಾಮದ ಆಂಜನೇಯ, ಪೆದ್ದಹೂತೂರಿನ ಹುಚ್ಚೀರಪ್ಪ, ಮೈನಾಪುರದ ವೈಕುಂಠ, ಟಿ. ಹುಚೀರಪ್ಪ ಹಾಗೂ ರಾಯಪ್ಪ ಕೊಡೇಕಲ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿವರ

ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ 16 ಎತ್ತುಗಳನ್ನು ಖರೀದಿಸಿದ ಆರೋಪಿಗಳು, ಒಂದೇ ವಾಹನದಲ್ಲಿ ಇಕ್ಕಟ್ಟಾದ ಜಾಗದಲ್ಲಿ ಜಾನುವಾರುಗಳಿಗೆ ಕೂರಲು, ನಿಲ್ಲಲು ಅವಕಾಶವಿಲ್ಲದಂತೆ ಸಾಗಿಸಲಾಗುತ್ತಿತ್ತು. ಈ ಖಚಿತ ಮಾಹಿತಿಯ ಮೇರೆಗೆ ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿ ದಾಳಿ ಮಾಡಿದ ಪೊಲೀಸರು, ವಾಹನದಲ್ಲಿ ಪರಿಶೀಲನೆ ಮಾಡಲಾಗಿ 16 ಜಾನುವಾರುಗಳನ್ನು ಅಕ್ರಮವಾಗಿ ಅಸುರಕ್ಷಿತವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

ಜಾನುವಾರುಗಳನ್ನು ಖರೀದಿ ಮಾಡಿದ್ದಕ್ಕೆ ಅಥವಾ ಸಾಗಾಣಿಕೆ ಮಾಡುತ್ತಿರುವುದಕ್ಕೆ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಅನುಮಾನಗೊಂಡ ಪೊಲೀಸರು, ಜಾನುವಾರುಗಳನ್ನು ರಕ್ಷಣೆ ಮಾಡಿ, ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Exit mobile version