Site icon Vistara News

Koppala News: ಮಕ್ಕಳ ತಟ್ಟೆಯಲ್ಲಿನ ಮೊಟ್ಟೆ ಕಸಿದುಕೊಂಡ ಅಂಗನವಾಡಿಗೆ ನ್ಯಾಯಾಧೀಶರ ದಿಢೀರ್ ಭೇಟಿ!

Koppala News

ಗಂಗಾವತಿ: ಮಕ್ಕಳಿಗೆ ಮೊಟ್ಟೆ ಕೊಟ್ಟು ವೀಡಿಯೋ ಮಾಡಿ ವಾಪಸ್ ಕಸಿದುಕೊಂಡು ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ನ್ಯಾಯಾಧೀಶರುಗಳು ದಿಢೀರ್ ಭೇಟಿ ನೀಡಿ, ಪರಿಶೀಲನೆ (Koppala News) ನಡೆಸಿದರು.

ಕೊಪ್ಪಳ ಜಿಲ್ಲಾ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್. ದರಗದ, ಗಂಗಾವತಿಯ ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ್ ಎಸ್. ಗಾಣಿಗೇರ ಅವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Government Employees: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಆ.17ರಂದು ವಿಶೇಷ ಸಾಂದರ್ಭಿಕ ರಜೆ

ಮೊಟ್ಟೆ ಪ್ರಕರಣ ಪೂರ್ಣ ಮಾಹಿತಿ ಪಡೆದುಕೊಂಡ ನ್ಯಾಯಾಧೀಶರು, ಕೇಂದ್ರದಲ್ಲಿ ಮಕ್ಕಳಿಗೆ ಇರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಶೌಚಾಲಯ, ಕುಡಿಯುವ ನೀರು, ದಾಸ್ತಾನು ಮಾಡಲಾಗಿರುವ ಆಹಾರ, ಮಕ್ಕಳಿಗೆ ನೀಡುವ ಔಷಧಿಗಳನ್ನು ಪರಿಶೀಲಿಸಿದರು.

ಅಂಗನವಾಡಿ ಕೇಂದ್ರದ ಸುತ್ತಲೂ ಇರುವ ಕಸಕಡ್ಡಿ, ತಿಪ್ಪೆಗುಂಡಿ ತೆರವಿಗೆ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Kannada New Movie: ಸಮರ್ಜಿತ್ ಲಂಕೇಶ್ ಅಭಿನಯದ ʼಗೌರಿʼ ಚಿತ್ರಕ್ಕೆ ನಟ ಉಪೇಂದ್ರ ಸಾಥ್‌; ಆ.15ಕ್ಕೆ ಸಿನಿಮಾ ರಿಲೀಸ್‌

ಕೇಂದ್ರದಲ್ಲಿ ನೀರಿನ ನಳ ಇಲ್ಲದಿರುವುದು, ಮಕ್ಕಳಿಗೆ ನಿತ್ಯ ನೀಡುವ ಆಹಾರದ ಮೆನು ಹಾಕದಿರುವುದು, ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯದ ಕಟ್ಟಡ ಬಿರುಕು ಉಂಟಾಗಿರುವುದನ್ನು ನ್ಯಾಯಾಧೀಶರುಗಳು ಗಮನಿಸಿ, ಸೂಕ್ತ ಕ್ರಮ‌ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Exit mobile version