ಕನಕಗಿರಿ: ಪಟ್ಟಣ ಸರ್ಕಾರಿ ಆಸ್ಪತ್ರೆ (Government Hospital) ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ರತ್ನಂ ಪಾಂಡೆಯ ದಿಢೀರನೆ ಭೇಟಿ (Surprise visit) ನೀಡಿ, ಪರಿಶೀಲನೆ ನಡೆಸಿದರು.
ಇಲ್ಲಿನ ತಾಲೂಕು ಆಸ್ಪತ್ರೆ ಹಾಗೂ ಮುಸಲಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿ, ಸೇವೆ, ವ್ಯವಸ್ಥೆ, ಔಷಧ ದಾಸ್ತಾನುಗಳ ಕುರಿತಾಗಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ನಂತರ ರೋಗಿಗಳೊಂದಿಗೆ ಮಾತನಾಡಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯ ಮತ್ತು ಔಷಧೋಪಚಾರಗಳ ಬಗ್ಗೆ ವಿಚಾರಿಸಿದರು. ನಂತರ ಆಸ್ಪತ್ರೆಯ ಆವರಣದಲ್ಲಿ ಉದ್ಯಾನ ನಿರ್ಮಾಣ ಹಾಗೂ ಕೇಂದ್ರಕ್ಕೆ ಮಳೆನೀರು ಕೊಯ್ಲು ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: BBMP Elections: ʼಬಿಜೆಪಿ ಕಚೇರಿ, ಕೇಶವ ಕೃಪಾದಲ್ಲಿ ಸಿದ್ಧವಾದ ವಾರ್ಡ್ ವಿಂಗಡಣೆʼ ರದ್ದು ಮಾಡುವತ್ತ ಕಾಂಗ್ರೆಸ್ ಸರ್ಕಾರ!
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ಆಸ್ಪತ್ರೆಗೆ 3 ಜನ ಹಿರಿಯ ವೈದ್ಯರ ಅವಶ್ಯಕತೆಯಿದ್ದು, ಶೀಘ್ರವಾಗಿ ವೈದ್ಯರ ನೇಮಕ ಮಾಡುವಂತೆ, ಮತ್ತು ಅವಶ್ಯವಿರುವ ಔಷಧಗಳ ಕೊರತೆಯಿದ್ದು, ಕೂಡಲೇ ಬೇಕಾದ ಔಷಧಗಳ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಅವಶ್ಯಕತೆಗಳಿಗನುಗುಣವಾಗಿ ತುರ್ತು ಸೇವೆಗೆ ಹೆಚ್ಚುವರಿ ಆಂಬ್ಯುಲೆನ್ಸ್ ಒದಗಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: Niveditha Gowda: ಅಂಡರ್ ವಾಟರ್‌ನಲ್ಲಿ ನಿವೇದಿತಾ- ಚಂದನ್ ಲಿಪ್ ಕಿಸ್; ವಿಡಿಯೊ ವೈರಲ್!
ನಂತರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜ, ರಸಗೊಬ್ಬರಗಳ ದಾಸ್ತಾನು ಮತ್ತು ಮಾರಾಟದ ಬೆಲೆ ಕುರಿತು ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚಿಸಿ, ಯಾವುದೇ ರೀತಿಯ ತೊಂದರೆಗಳಾಗದಂತೆ ಸರಿಯಾಗಿ ಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಕನಕಗಿರಿಯ ನರ್ಸರಿ ಕೇಂದ್ರಕ್ಕೆ ಭೇಟಿ ನೀಡಿ ಸಸಿಗಳ ಬಗ್ಗೆ ಮಾಹಿತಿ ಪಡೆದರು. ಸುಳೇಕಲ್ ಗ್ರಾ.ಪಂ ವ್ಯಾಪ್ತಿಯ ಕಲಿಕೇರಿ ಗ್ರಾಮಕ್ಕೆ ಭೇಟಿ ನೀಡಿ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳವನ್ನು ಪರಿಶೀಲನೆ ಮಾಡಿದರು.
ಇದನ್ನೂ ಓದಿ: GST Collection : ಮೇನಲ್ಲಿ 1.57 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಕರ್ನಾಟಕದಲ್ಲಿ ಎಷ್ಟು?
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜಯ್ ಕಾಂಬ್ಳೆ, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಚಂದಕೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.