Site icon Vistara News

Koppala News: ಕನಕಗಿರಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Sudden protest by students demanding adequate bus facility at Kanakagiri

ಕನಕಗಿರಿ: ಸಮರ್ಪಕ ಬಸ್ ಸೌಲಭ್ಯ (Bus facility) ಒದಗಿಸುವಂತೆ ಆಗ್ರಹಿಸಿ, ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳ ಶಾಲಾ-ಕಾಲೇಜು ವಿಧ್ಯಾರ್ಥಿಗಳಿಂದ ಏಕಾಏಕಿ ಬಸ್‌ಗಳನ್ನು (Bus) ತಡೆದು ಸುಮಾರು 4 ತಾಸಿಗೂ ಹೆಚ್ಚು ಸಮಯ ಪ್ರತಿಭಟನೆ (Protest) ನಡೆಸಿದ ಘಟನೆ ಸೋಮವಾರ ಜರುಗಿತು.

ಕನಕಗಿರಿಯಿಂದ ಗಂಗಾವತಿ, ಕೊಪ್ಪಳ, ತಾವರಗೇರಾ ಇನ್ನಿತರ ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಲು ನಿತ್ಯ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಸರ್ಕಾರಿ ಬಸ್ ಸೇವೆಯನ್ನೇ ಅವಲಂಬಿಸಿದ್ದು ಶಾಲಾ ಕಾಲೇಜುಗಳು ಆರಂಭವಾಗಿ ಒಂದು ತಿಂಗಳಾದರೂ ಸಹ ಸಮಯಕ್ಕೆ ಸರಿಯಾಗಿ, ಸಮರ್ಪಕ ಬಸ್ ಸೇವೆ ಒದಗಿಸದ ಕಾರಣ ಪ್ರತಿದಿನ ವಿದ್ಯಾರ್ಥಿಗಳು ಪ್ರಾಯಾಸ ಪಡುವಂತಾಗಿದೆ.

ಇದನ್ನೂ ಓದಿ: ವಿಸ್ತಾರ Explainer: France Riots: ಫ್ರಾನ್ಸ್‌ ಹೊತ್ತಿ ಉರಿಯುತ್ತಿರುವುದೇಕೆ?

ಚಲಿಸುವ ಬಸ್ ಬಾಗಿಲಿಗೆ ಜೋತು ಬಿದ್ದು, ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡಬೇಕಾಗಿದೆ. ಅಲ್ಲದೆ ಪ್ರತಿದಿನ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲಾಗದೆ ಪಾಠಗಳಿಗೆ ಗೈರಾಗಬೇಕಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.

ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ಬಸ್ ಸೇವೆ ಒದಗಿಸುವಂತೆ ಕನಕಗಿರಿ ನಿಯಂತ್ರಣಾಧಿಕಾರಿ ಶ್ರೀರಾಮ್ ನಾಯಕ್ ಅವರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಇದನ್ನೂ ಓದಿ: Bitcoin Scam : ಬಿಟ್‌ ಕಾಯಿನ್‌ ಹಗರಣ ಮರುತನಿಖೆಗೆ ಸರ್ಕಾರ ಆದೇಶ ; ಬಿಜೆಪಿಗೆ ನಡುಕ?

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಗಂಗಾವತಿ ಘಟಕದ ಪ್ರಭಾರ ವ್ಯವಸ್ಥಾಪಕ ಪರಶುರಾಮ್ ನಾಯಕ್‌ರವರು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

Exit mobile version