ಕನಕಗಿರಿ: ಊಟ ಮಾಡುವಾಗ ಅನ್ನದ ಅಗುಳು ಗಂಟಲಲ್ಲಿ (Throat) ಸಿಲುಕಿ ಉಸಿರುಗಟ್ಟಿದ (Suffocated) ಪರಿಣಾಮವಾಗಿ 14 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆಯು ಕನಕಗಿರಿ ಪಟ್ಟಣದಲ್ಲಿ ನಡೆದಿದೆ.
ಕನಕಗಿರಿ ಪಟ್ಟಣದ 17ನೇ ವಾರ್ಡಿನ ನಿವಾಸಿಗಳಾಗಿರುವ ರುದ್ರಮ್ಮ ಗಂಡ ನಿರುಪಾದಿ ಎಂಬ ದಂಪತಿಗಳ 2ನೇ ಪುತ್ರ ಆಂಜನೇಯ ಮೃತ ಬಾಲಕ.
ಇದನ್ನೂ ಓದಿ: Free Electricity: ಗೃಹ ಜ್ಯೋತಿ ಅರ್ಜಿ ಸ್ವೀಕಾರ ಆರಂಭ ಮುಂದೂಡಿಕೆ; ದಿಢೀರ್ ನಿರ್ಧಾರಕ್ಕೆ ಕಾರಣವೇನು?
ಘಟನೆಯ ಹಿನ್ನಲೆ ಏನು?
ಮೃತ ಬಾಲಕನು ಮನೋ ವಿಶೇಷ ಚೇತನನಾಗಿದ್ದು, ಜಮೀನಿನ ಮನೆಯಲ್ಲಿ ತಾಯಿ ರುದ್ರಮ್ಮ ಬಾಲಕನಿಗೆ ಊಟ ಕೊಟ್ಟು ಜಮೀನಿನ ಕೆಲಸದಲ್ಲಿ ತೊಡಗಿದ್ದಳು. ಆದರೆ ದುರದೃಷ್ಟವಶಾತ್, ಊಟ ಮಾಡುವಾಗ ಗಂಟಲಲ್ಲಿ ಅನ್ನದ ಅಗುಳು ಸಿಲುಕಿ ಉಸಿರುಗಟ್ಟಿ ಬಾಲಕ ಆಂಜನೇಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಕಲ್ಪನೆಯೂ ಇಲ್ಲದೆ, ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದ ತಾಯಿಯು ಮಗನ ಅವಸ್ಥೆ ಕಂಡು ದಿಗ್ಭ್ರಾಂತಗೊಂಡಿದ್ದಾರೆ. ನಂತರ ಕುಟುಂಬದವರನ್ನು ಮನೆಗೆ ಕರೆಯಿಸಿ ಪರೀಕ್ಷಿಸಿದಾಗ ಸಾವು ಖಚಿತವಾಗಿದ್ದು, ಮೃತ ಬಾಲಕನ ಕುಟುಂಬ ಶೋಕದ ಮಡುವಿನಲ್ಲಿ ಮುಳುಗಿದೆ.