Site icon Vistara News

Koppala News: ಕಾರಟಗಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಸಿ: ತಾ.ಪಂ ಇಒ ಸೂಚನೆ

Progress review meeting at Karatagi

ಕಾರಟಗಿ: ಕೊಪ್ಪಳ ಜಿಲ್ಲೆಯ ವಿವಿಧ ಕಡೆ ಈಚೆಗೆ ಕಲುಷಿತ ನೀರು (Contaminated water) ಪೂರೈಕೆಯಾಗಿ (Supply) ವಾಂತಿ-ಭೇದಿ ಪ್ರಕರಣಗಳು (Vomiting-dysentery cases) ಕಂಡುಬಂದ ಹಿನ್ನೆಲೆ ತಾಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ತಾ.ಪಂ ಇಒ ನರಸಪ್ಪ ಎನ್. ಹೇಳಿದರು.

ಪಟ್ಟಣ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಗ್ರಾಮೀಣ ‌ಕುಡಿಯುವ ನೀರು ಮತ್ತು ನೈರ್ಮಲ್ಯ, ಜಲ ಜೀವನ್ ಮಿಷನ್ ಸೇರಿದಂತೆ ಇನ್ನಿತರ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Free Bus Service: ಸರ್ಕಾರಿ ಬಸ್‌ನಲ್ಲಿ ಮಹಿಳಾ ಶಕ್ತಿವೈಭವ ; 3ನೇ ದಿನದ ವೆಚ್ಚ 11 ಕೋಟಿಗೆ ಏರಿಕೆ

ಗ್ರಾಮದಲ್ಲಿನ ಒ.ಎಚ್.ಟಿ ಟ್ಯಾಂಕ್, ಸ್ವಚ್ಛಗೊಳಿಸಿ, ಒಣಗಿಸಿದ ಮೇಲೆ ಟ್ಯಾಂಕ್ ಗೆ ನೀರು ಪೂರೈಕೆ ಮಾಡಿ, ನೀರಿನ ಪ್ರಮಾಣ ತಕ್ಕಂತೆ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಚತೆ ಕಾರ್ಯ ಮಾಡಿ, ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಮುತುವರ್ಜಿ ವಹಿಸಬೇಕು. ಕಲುಷಿತ ನೀರು ಪೂರೈಕೆಯಾಗುವ ಮಾಹಿತಿಯನ್ನು ಸಂಗ್ರಹಿಸಿ ಅಂತಹ ಸ್ಥಳಕ್ಕೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ‌ಇಲಾಖೆಯ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ, ಸಮಸ್ಯೆ ಇತ್ಯರ್ಥ ಪಡಿಸಬೇಕು. ಪ್ರತಿಯೊಂದು ಗ್ರಾಮದಲ್ಲಿ ಯೋಗ್ಯವಾದ ನೀರು ಸೇವಿಸುವಂತೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಕುಡಿಯುವ ನೀರಿನ ಪೂರೈಕೆ ಸಂಬಂಧಿಸಿದಂತೆ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ದಿನ ನಿತ್ಯದ ಕುಡಿಯುವ ನೀರಿನ ಸರಬರಾಜು ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ‌ಯಾಗದಂತೆ ನೋಡಿಕೊಳ್ಳುವಂತೆ ಇಲಾಖೆಯ ಕಿರಿಯ ಅಭಿಯಂತರ ಸಿದ್ದಪ್ಪ ಅವರಿಗೆ ತಿಳಿಸಿದರು.

ಇದನ್ನೂ ಓದಿ: KCET 2023 Result : ಸಿಇಟಿ ಫಲಿತಾಂಶ ನಾಳೆ ಪ್ರಕಟ

ಪ್ರತಿಯೊಂದು ಹಳ್ಳಿಗಳಿಗೆ ಸರಬರಾಜು ಮಾಡುವ ನೀರಿನ ಸ್ಯಾಂಪಲ್‌ಗಳನ್ನು ತಪಾಸಣೆಗೆ‌ ಕಳುಹಿಸಬೇಕು. ಬಂದಂತಹ ವರದಿ ಪ್ರಕಾರ ಯೋಗ್ಯವಾದ ನೀರು ಒದಗಿಸಲು ಮುಂದಾಗಿ, ಕುಡಿಯಲು ಯೋಗ್ಯವಲ್ಲದ ‌ನೀರಿನ ವರದಿ ಕಂಡು ಬಂದರೆ ಅಂತಹ ಕಡೆ ಶುದ್ಧ ಕುಡಿಯುವ ನೀರು ಒದಗಿಸಲು ಗ್ರಾಮ ಅಭಿವೃದ್ಧಿ ‌ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿ ಪೂರೈಕೆಯಾಗುವ ನೀರಿನ ತಪಾಸಣೆ ಮಾಡಿದ ವರದಿಯನ್ನು ತಾಲೂಕು ಪಂಚಾಯತಿಗೆ ಸಲ್ಲಿಸಬೇಕು ಹಾಗೇ ಜಲ ಜೀವನ್ ಮಿಷನ್ ಯೋಜನೆ ಹಾಗೂ ತಾಲೂಕಿನ ರಾಜೀವ್ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದು, ಸಮಸ್ಯೆ ಇದ್ದಲ್ಲಿ ಕ್ರಮ ವಹಿಸುವಂತೆ ಇಲಾಖೆಯ ಎಂಜಿನಿಯರ್‌ಗೆ ಸೂಚಿಸಿದರು.

ನಾಗನಕಲ್ ಸಮುದಾಯ ಆರೋಗ್ಯ ಅಧಿಕಾರಿ ಹನುಮಂತಪ್ಪ, ಗ್ರಾಮ ಪಂಚಾಯತಿಯಲ್ಲಿ ಸ್ವಚ್ಚತೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳ ಕುರಿತು ಸಲಹೆಗಳನ್ನು ‌ನೀಡಿದರು.

ಇದನ್ನೂ ಓದಿ: Duleep Trophy 2023: ದುಲೀಪ್ ಟ್ರೋಫಿಗೆ ದಕ್ಷಿಣ ವಲಯ ತಂಡ ಪ್ರಕಟ; ನಾಲ್ಕು ಕನ್ನಡಿಗರಿಗೆ ಅವಕಾಶ

ಈ ವೇಳೆ ತಾ.ಪಂ ಯೋಜನಾಧಿಕಾರಿ ರಾಘವೇಂದ್ರ, ಉಪ ತಹಸೀಲ್ದಾರ್ ಉಮಾಮಹೇಶ್ , ಕಾರಟಗಿ ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಯೋಜನೆಗಳ ವಿಷಯ ‌ನಿರ್ವಾಹಕರು, ತಾಲೂಕಾ ಪಂಚಾಯತ ನರೇಗಾ ಯೋಜನೆಯ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version