Site icon Vistara News

Koppala News : ಕೊಪ್ಪಳದಲ್ಲಿ ಕ್ಯಾಂಟರ್ ಡಿಕ್ಕಿ: ಹೋಂ ಗಾರ್ಡ್ ಸ್ಥಳದಲ್ಲೇ ಸಾವು

Canter collision from rear

ಕೊಪ್ಪಳ: ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಗೃಹರಕ್ಷಕ ದಳ ಸಿಬ್ಬಂದಿಯೊಬ್ಬ (Home guard) ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಚಿಕ್ಕಸೂಳಿಕೇರಿ ತಾಂಡಾ ಬಳಿ ಜರುಗಿದೆ.

ಕೊಪ್ಪಳ ನಗರ‌ ನಿವಾಸಿ ರಾಘವೇಂದ್ರ ಕಮ್ಮಾರ ಮೃತ ಹೋಂ ಗಾರ್ಡ್ ಎಂದು ಗುರುತಿಸಲಾಗಿದೆ. ತಾಲೂಕಿನ ಚಿಕ್ಕಸೂಳಿಕೇರಿ ತಾಂಡಾ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕೊಪ್ಪಳ ಗ್ರಾಮೀಣ ಠಾಣೆ ಎಎಸ್ಐಯೊಂದಿಗೆ ಹೋಂ ಗಾರ್ಡ್ ರಾಘವೇಂದ್ರ ಕಮ್ಮಾರ ಹೆದ್ದಾರಿ ಗಸ್ತಿನಲ್ಲಿದ್ದ ವೇಳೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ರಾಘವೇಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ರಾಘವೇಂದ್ರ ಗೆ ಡಿಕ್ಕಿ ಹೊಡೆದ ಬಳಿಕ ಕ್ಯಾಂಟರ್ ಮತ್ತೆ ಎರಡು ಲಾರಿಗಳಿಗೂ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version