Site icon Vistara News

Koppala News: ಕೊಪ್ಪಳ; ಪ್ರಧಾನಿ ಮೋದಿ ದೇಶದ ಗೌರವ ಹೆಚ್ಚಿಸಿದ್ದಾರೆ: ಸಂಸದ ಸಂಗಣ್ಣ ಕರಡಿ

Koppala MP sanganna karadi pressmeet

ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ದೇಶದ ಗೌರವವನ್ನು ಹೆಚ್ಚಿಸಿದ್ದು ಈ 9 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತಿನ ಜನ ದೇಶದ ದೇಗುಲ ಉದ್ಘಾಟನೆ ಮಾಡುವದನ್ನು ವೀಕ್ಷಿಸುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಕುಸ್ತಿಪಟುಗಳು ಹೋರಾಟ ಮಾಡಿರೋದು ಎಷ್ಟು ಸರಿ? ಕುಸ್ತಿಪಟು ಮಾಡುವ ಆರೋಪ ಹಾಗೂ ಅವರ ಹೋರಾಟಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹೋರಾಟದ ಸಂದರ್ಭ ಯಾವುದು ಎಂಬುವುದು ನೋಡಬೇಕು. ಅನ್ಯಾಯವಾಗಿದ್ದರೆ ತನಿಖೆಯಾಗಲಿ. ಹೋರಾಟ ಮಾಡೋದಕ್ಕೆ ನಮ್ಮ ವಿರೋಧವಿಲ್ಲ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆನ್ನುವುದು ನಮ್ಮ ಒತ್ತಾಯವೂ ಇದೆ ಎಂದರು.

ಇದನ್ನೂ ಓದಿ: Star Saree Fashion : ಲೆನಿನ್‌ ಕಲಾಂಕಾರಿ ಮಿಕ್ಸ್‌ ಮ್ಯಾಚ್‌ ಸೀರೆಯಲ್ಲಿ ಮನಸೆಳೆದ ನಟಿ ಪಾವನಾ

ಇನ್ನು ಈ ವಿಧಾನಸಭೆ ಚುನಾವಣೆಯ ಫಲಿತಾಂಶದ ಆಧಾರದಲ್ಲಿ ಮುಂದಿನ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಹೇಳೋದಕ್ಕಾಗಲ್ಲ. ಇನ್ನೂ ಮೂರು ತಿಂಗಳಲ್ಲಿ ಏನೇನೊ ಬದಲಾವಣೆಗಳಾಗಬಹುದು. ಈಗ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತಾರೆ ಎಂಬುದನ್ನು ನೋಡಬೇಕು ಎಂದರು.

ನಾನು ನಿನ್ನೆ ದೆಹಲಿಯಿಂದ ಮುಂಜಾನೆ 10 ಗಂಟೆಗೆ ಬಿಟ್ಟು ಮಧ್ಯಾಹ್ನ 2.30 ಗೆ ಹುಬ್ಬಳ್ಳಿಗೆ ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಅಷ್ಟರ ಮಟ್ಟಿಗೆ ಸಂಪರ್ಕ ಸಾಧನೆಯಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: MS Dhoni : ಮೊದಲ ಪಂದ್ಯದ ವೇಳೆಯೇ ಕಣ್ಣೀರು ಹಾಕಿದ್ದ ಮಹೇಂದ್ರ ಸಿಂಗ್ ಧೋನಿ!

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ, ಮಹೇಶ ಹಾದಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version