Site icon Vistara News

Koppala News: ಬೇಸಿಗೆ ಶಿಬಿರ ಕೇಂದ್ರದಲ್ಲಿ ಶಾಲಾ ಮಕ್ಕಳೊಂದಿಗೆ ಬೆರೆತು ಆಟವಾಡಿದ ಜಿ.ಪಂ. ಸಿಇಒ

Koppala ZP CEO visit summer camp center

ಕುಕನೂರು: ತಾಲೂಕಿನ ಭಾನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರ (Summer camp) ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ್ದ ಕೊಪ್ಪಳ ಜಿ.ಪಂ. ಸಿಇಒ (CEO) ರಾಹುಲ್ ರತ್ನಂ ಪಾಂಡೇಯ ಅವರು ಕೆಲಕಾಲ ಶಾಲಾ ಮಕ್ಕಳೊಂದಿಗೆ (School children’s) ಆಟವಾಡುವ ಮೂಲಕ ಸಮಯ ಕಳೆದರು.

ಜಿಲ್ಲಾ ಪಂಚಾಯಿತಿಯ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಓದುವ ಬೆಳಕು ಕಾರ್ಯಕ್ರಮದಡಿ ತಾಲೂಕಿನ ಭಾನಾಪೂರ ಮತ್ತು ತಳಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈಗಾಗಲೇ ಪ್ರಾರಂಭವಾಗಿರುವ ಬೇಸಿಗೆ ಶಿಬಿರದಲ್ಲಿ ಶಾಲಾ ಮಕ್ಕಳಿಗೆ ಆಟ ಪಾಠಗಳೊಂದಿಗೆ ಕಚ್ಚಾ ವಸ್ತುಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗೆಗೆ ತರಬೇತಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಮಾತ್ರ; ಈಗ ಎಲ್ಲ ಮಂತ್ರಿಗಳೂ ನನ್ನ ವ್ಯಾಪ್ತಿಗೆ ಬರುತ್ತಾರೆ: ಯು.ಟಿ. ಖಾದರ್

ಪ್ರತಿಯೊಂದು ಮಗುವಿನ ಕೈಕುಲುಕಿ ಮಕ್ಕಳಲ್ಲಿದ್ದ ಭಯವನ್ನು ದೂರ ಮಾಡಿ, ಅವರೊಂದಿಗೆ ಬೆರೆತು ಮಕ್ಕಳ ಚಟುವಟಿಕೆಗಳನ್ನು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಅವರು ಸೂಕ್ಷ್ಮವಾಗಿ ಗಮಸಿದರು. ಇದೇ ವೇಳೆ ಮಕ್ಕಳೊಂದಿಗೆ ಕೆಲಕಾಲ ಲಗೋರಿ, ಖೋಖೋ, ಕಬಡ್ಡಿ, ಕೇರಂ, ಕೆರೆ ದಡ, ಹಾವು ಏಣಿ ಆಟಗಳನ್ನು ಆಡಿ, ಖುಷಿಪಟ್ಟರು.

ಬಳಿಕ ಮಾತನಾಡಿದ ಜಿಪಂ ಸಿಇಒ ರಾಹುಲ್‌ ರತ್ನಂ ಪಾಂಡೇಯ, ಬೇಸಿಗೆ ಶಿಬಿರ ವೀಕ್ಷಣೆಯೊಂದಿಗೆ ಗ್ರಾಮದ ಆರೋಗ್ಯ ಕೇಂದ್ರ, ಪೋಸ್ಟ್ ಆಫೀಸ್, ಗ್ರಾಮ ಪಂಚಾಯತಿ, ಕುಡಿಯುವ ನೀರಿನ ನಿರ್ವಹಣೆ, ಸ್ವ ಸಹಾಯ ಸಂಘಗಳ ಕಾರ್ಯವೈಖರಿಗಳನ್ನು ತಿಳಿದುಕೊಳ್ಳಲು ಈ ಶಿಬಿರ ಸಹಕಾರಿಯಾಗಿದೆ ಎಂದು ತಿಳಿಸಿದರು.

ಮಕ್ಕಳು ಬೇಸಿಗೆ ಶಿಬಿರದ ದೈನಂದಿನ ಚಟುವಟಿಕೆಯಲ್ಲಿ ಮಾಡಿದ ಕ್ರಾಫ್ಟ್‌ಗಳನ್ನು ವೀಕ್ಷಿಸಿ, ಮಕ್ಕಳ ಕಲಿಕಾ ಆಸಕ್ತಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: New Parliament Building: ಸಂಸತ್‌ ಭವನದ ಉದ್ಘಾಟನೆ; ರಾಷ್ಟ್ರಪತಿಗೆ ಆಹ್ವಾನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ನಂತರ ತಳಕಲ್ ಗ್ರಾಮದಲ್ಲಿ ನಿರ್ಮಾಣವಾದ ಉದ್ಯಾನವನ ಹಾಗೂ ಸ್ವ-ಸಹಾಯ ಸಂಘದಿಂದ ಮಹಿಳೆಯರು ನಡೆಸುತ್ತಿರುವ ಮೊಬೈಲ್ ಕ್ಯಾಂಟೀನ್ ಅನ್ನು ವೀಕ್ಷಿಸಿದರು.

Exit mobile version