ಕುಷ್ಟಗಿ: ಹಾವು ((Snake) ಎಂದ ಕೂಡಲೇ ಬಹುತೇಕರು ಮಾರು ದೂರ ಓಡುತ್ತಾರೆ. ಆದರೆ ಇಲ್ಲೊಬ್ಬ ಉರಗ ಪ್ರೇಮಿ ಹಾವು ಕಚ್ಚಿದರೂ (Snake bite) ಭಯಬೀಳದೆ, ವಿಚಲಿತಗೊಳ್ಳದೆ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸ್ನೇಕ್ ಮೌಲಾಸಾಬ್ ಎಂಬ ಉರಗಪ್ರೇಮಿ ನೀರಗುಳಿ ಹೆಸರಿನ ಅಷ್ಟೇನೂ ವಿಷಕಾರಿಯಲ್ಲದ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿನ ಚಂದ್ರಲಾ ಪೆಟ್ರೋಲ್ ಬಂಕ್ ಬಳಿ ಈ ಹಾವು ಕಾಣಿಸಿಕೊಂಡಿದೆ. ಆಗ ಸ್ನೇಕ್ ಮೌಲಾಸಾಬ್ ಅವರು ಹಾವನ್ನು ಹಿಡಿದಿದ್ದಾರೆ. ಆ ಸಂದರ್ಭದಲ್ಲಿ ಹಾವು ಅವರ ಕೈಗೆ ಕಚ್ಚಿದೆ. ಆದರೂ ಮೌಲಾಸಾಬ್ ಅವರು ಭಯಬೀಳದೆ, ವಿಚಲಿತರಾಗದೆ ಹಾವನ್ನು ಹಿಡಿದು ಡಬ್ಬಾದಲ್ಲಿ ಹಾಕಿಕೊಂಡು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿ: IPL 2023 : ಐಪಿಎಲ್ 2023ನೇ ಆವೃತ್ತಿಯ ಯಾವ ಪ್ರಶಸ್ತಿ ಯಾರಿಗೆ? ಗಿಲ್‌ಗೆ ಯಾವ ಕ್ಯಾಪ್?
ಈಗಾಗಲೇ ಅನೇಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಸ್ನೇಕ್ ಮೌಲಾಸಾಬ್, ಕುಷ್ಟಗಿಯ ಸಂತ ಶಿಶುನಾಳ ಶರೀಫ ನಗರದ ನಿವಾಸಿಯಾಗಿದ್ದಾರೆ.