Site icon Vistara News

Koppala News: ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಬಳಸಿ; ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ

H. Rajesh Nayaka Dore wrote a letter to the CM

ಗಂಗಾವತಿ: ಕರ್ನಾಟಕದಲ್ಲಿ (Karnataka) ಕನ್ನಡವೇ (Kannada) ಸಾರ್ವಭೌಮ ಎಂದು ಪರಿಗಣಿಸುವ ಸರ್ಕಾರ (Government) ಕೂಡಲೇ ತನ್ನ ಲಾಂಛನದಲ್ಲಿ ಕನ್ನಡ ಲಿಪಿಯನ್ನು ಬಳಸಬೇಕು ಎಂದು ಸಂಘಟನೆಯ ಮುಖಂಡರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಅಖಿಲ ಕರ್ನಾಟಕ ಹರಿಹರ ಹಕ್ಕಬುಕ್ಕ ನಾಯಕ ಮಹಾವೇದಿಕೆಯ ರಾಜ್ಯಾಧ್ಯಕ್ಷ ಎಚ್.ರಾಜೇಶ್ ನಾಯಕ ದೊರೆ, ಈ ಬಗ್ಗೆ ಸಿಎಂಗೆ ಪತ್ರ ಬರೆದು ಲಾಂಛನದಲ್ಲಿ ಕನ್ನಡ ಬಳಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Gold rate today : ಇಳಿದಿದ್ದ ಬಂಗಾರದ ದರದಲ್ಲಿ ಮತ್ತೆ 320 ರೂ. ಏರಿಕೆ, ಬೆಳ್ಳಿ 1,000 ರೂ. ಇಳಿಕೆ

ದೇಶದ ಬಹುತೇಕ ರಾಜ್ಯಗಳಂತೆಯೇ ಕರ್ನಾಟಕವೂ ಕೂಡ ವಿಶಿಷ್ಟ ಹಾಗೂ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಲಾಂಛನ ಹೊಂದಿದೆ. ಕರ್ನಾಟಕ ಸರ್ಕಾರದ ಲಾಂಛನವನ್ನು ಭಾರತ ಸರ್ಕಾರದ ಲಾಂಛನದಲ್ಲಿರುವಂತೆ ಸಾಮ್ರಾಟ್ ಅಶೋಕ ಸ್ತಂಭದ ಭಾಗ ಮತ್ತು ಮೈಸೂರು ರಾಜ್ಯದ ಲಾಂಛನದ ಭಾಗವನ್ನು ಒಗ್ಗೂಡಿಸಿ ರೂಪಿಸಲಾಗಿದೆ.

ಕೊನೆಯಲ್ಲಿ ಸತ್ಯಮೇವ ಜಯತೇ ಎಂಬ ವಾಖ್ಯ ದೇವನಾಗರಿ ಲಿಪಿಯಲ್ಲಿದೆ. ನಮ್ಮ ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿಯನ್ನು ಬಳಕೆ ಮಾಡಿಲ್ಲ. ಅದೇ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಲಾಂಛನಗಳಲ್ಲಿ ಅವರ ರಾಜ್ಯ ಭಾಷೆಗಳ ಉಪಯೋಗ ಮಾಡಿದ್ದಾರೆ.

ಇದನ್ನೂ ಓದಿ: Rakshit shetty: ಎರಡು ಭಾಗಗಳಲ್ಲಿ ಬರಲಿದೆ ʻಸಪ್ತ ಸಾಗರದಾಚೆ ಎಲ್ಲೋʼ

ಅದೇ ರೀತಿ ಕರ್ನಾಟಕ ಸರ್ಕಾರದ ಲಾಂಛನದಲ್ಲೂ ನಮ್ಮ ಮಾತೃಭಾಷೆ ಕನ್ನಡ ಲಿಪಿಯೇ ಇರಬೇಕು. ಸತ್ಯಮೇವ ಜಯತೆ ಬದಲಿಗೆ ಅಥವಾ ಜತೆಗೆ `ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ’ ಎಂದು ಉಪಯೋಗಿಸುವುದು ಹೆಚ್ಚು ಸೂಕ್ತ ಎನಿಸಿದೆ. ಹೀಗಾಗಿ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು.

ಇದನ್ನೂ ಓದಿ: WTC Final 2023: ದ್ರಾವಿಡ್​ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ಪೂಜಾರ; ಏನದು?

ಇದಕ್ಕಾಗಿ ತಜ್ಞರ ಸಮಿತಿ ರಚಿಸಿ ಸೂಕ್ತ ರೀತಿಯಲ್ಲಿ ರಾಜ್ಯ ಸರ್ಕಾರದ ಲಾಂಛನದಲ್ಲೂ ಮಾರ್ಪಾಡು ಮಾಡಿ ಕನ್ನಡ ಲಿಪಿ ಬಳಸುವ ಮೂಲಕ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಸಂದೇಶ ರವಾನಿಸಬೇಕು ಎಂದು ರಾಜೇಶ್ ನಾಯಕ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Exit mobile version