ಕಾರಟಗಿ: ಕ್ಷಯರೋಗದ (Tuberculosis) ಕುರಿತು ಪ್ರತಿಯೊಬ್ಬರಿಗೂ ಜಾಗೃತಿ (Awareness) ಮೂಡಿಸಿ, ಕ್ಷಯರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಿ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ತಾ.ಪಂ ಇಒ ನರಸಪ್ಪ ಎನ್. ಹೇಳಿದರು.
ಪಟ್ಟಣದ ನವಲಿ ರಸ್ತೆಯ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಮ್ಮ ನಡೆ ಕ್ಷಯ ಮುಕ್ತ ಕೊಪ್ಪಳ ಕಡೆ, ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Road Accident : ಅಪಘಾತವಾಗಿ ಗಂಟೆಗಟ್ಟಲೆ ನರಳಿದರೂ ಕೈಕಟ್ಟಿ ನೋಡಿದ ಜನ!
ಕ್ಷಯ ರೋಗ ಸಾಂಕ್ರಾಮಿಕ ರೋಗವಾಗಿದ್ದು, ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಬೇರೆಯವರಿಗೆ ಹರಡುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣಕ್ಕೂ ರೋಗದ ಬಗ್ಗೆ ನಿರ್ಲಕ್ಷ್ಯಿಸದೇ ಶೀಘ್ರ ಪತ್ತೆ ಮಾಡಿ, ಚಿಕಿತ್ಸೆ ಪಡೆದುಕೊಂಡು ರೋಗದಿಂದ ಮುಕ್ತರಾಗಲು ಪ್ರತಿಯೊಬ್ಬರಿಗೆ ಮಾಹಿತಿ ನೀಡಬೇಕಾಗಿದೆ.
ಭಾರತ ದೇಶದಲ್ಲಿ 2025 ರೊಳಗೆ ಕ್ಷಯರೋಗ ಮುಕ್ತ ಮಾಡಲು ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದ್ದು ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದರು. ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕಿ ವೈ.ವನಜಾ ಮಾತನಾಡಿದರು.
ಬೇವಿನಹಾಳ್ ಸಮುದಾಯ ಆರೋಗ್ಯ ಅಧಿಕಾರಿ ಹನುಮಂತಪ್ಪ ಗುರಿಕಾರ್ ಅವರು ಸಾರ್ವಜನಿಕರು ಕ್ಷಯರೋಗ (ಟಿ.ಬಿ) ಬಗ್ಗೆ ತಿಳಿಯಬೇಕಾದ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Namami Gange: ಟ್ರಾನ್ಸ್‌ಫಾರ್ಮರ್ ಸ್ಫೋಟ; ನಮಾಮಿ ಗಂಗೆ ಯೋಜನೆಯ 20 ಕಾರ್ಮಿಕರ ಸಾವು, ಹಲವರಿಗೆ ಗಾಯ
ಈ ವೇಳೆ ತಾಲೂಕು ಸಂಯೋಜಕರು ಗ್ರಾಮ ಆರೋಗ್ಯ ನಿರುಪಾದಿ ಅರಳಿಗನೂರು, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಪರಶುರಾಮ, ಸಮುದಾಯ ಆರೋಗ್ಯ ಸಂಯೋಜಕ ದೇವರಾಜ್, ಸೇರಿದಂತೆ ತಾಲೂಕು ಪಂಚಾಯತಿ ಸಿಬ್ಬಂದಿ ಇದ್ದರು.