ಗಂಗಾವತಿ: ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ಸ್ಥಾಪಿಸಲಾದ `ಮಮತೆಯ ತೊಟ್ಟಿಲು’ ಕಾರ್ಯಕ್ರಮಕ್ಕೆ ಬುಧವಾರ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಚಾಲನೆ (Koppala News) ನೀಡಿದರು.
ಇದನ್ನೂ ಓದಿ: Sirsi News: ವಿಶ್ವಶಾಂತಿಗೆ ಯಕ್ಷ ನೃತ್ಯ ಕೊಡುಗೆ; ವಿಶ್ವದಾಖಲೆ ಪಟ್ಟಿಗೆ ತುಳಸಿ ಹೆಗಡೆ ಸೇರ್ಪಡೆ
ಕಾರ್ಯಕ್ರಮವನ್ನು ತೊಟ್ಟಿಲು ತೂಗುವುದರ ಮೂಲಕ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ಬಳಿಕ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಪರಿತ್ಯಕ್ತ 19, ಪಾಲಕರೇ ಸ್ವಯಂ ಆಗಿ ಇಲಾಖೆಯ ಸುಪರ್ದಿಗೆ 23 ಮಕ್ಕಳನ್ನು ಒಪ್ಪಿಸಿದ್ದಾರೆ. ಈ ಪೈಕಿ ಸ್ಪೇನ್, ಸ್ವೀಡನ್ ದೇಶದ ಪೋಷಕರು ತಲಾ ಒಂದು ಮಗು ಹಾಗೂ ಅಮೆರಿಕದ ಇಬ್ಬರು ಪೋಷಕರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ 38 ಮಕ್ಕಳನ್ನು ದತ್ತು ನೀಡಲಾಗಿದೆ ಎಂದು ತಿಳಿಸಿದರು.
ಹೆತ್ತವರಿಗೆ ಬೇಡವಾದ ಮತ್ತು ಪರಿತ್ಯಕ್ತ ಮಕ್ಕಳನ್ನು ಸಂರಕ್ಷಣೆ ಮಾಡುವ ಉದ್ದೇಶಕ್ಕೆ ‘ಮಮತೆಯ ತೊಟ್ಟಿಲು’ ಎಂಬ ಯೋಜನೆ ಜಾರಿ ಮಾಡಲಾಗಿದೆ. ಈ ಮಮತೆಯ ತೊಟ್ಟಿಲಿನ ನಾಲ್ಕು ಮಕ್ಕಳು ವಿದೇಶಿ ದಂಪತಿಗಳ ಮಡಿಲು ಸೇರಿದ್ದು ವಿಶೇಷ ಎಂದು ಅವರು ಹೇಳಿದರು.
ಇದನ್ನೂ ಓದಿ: Kannada New Movie: ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘ಫ್ಯಾಮಿಲಿ ಡ್ರಾಮ’ ಸಿನಿಮಾದ ಸಾಂಗ್!
ಈ ಸಂದರ್ಭದಲ್ಲಿ ಗಂಗಾವತಿಯ ವಿವಿಧ ಶ್ರೇಣಿಯ ನ್ಯಾಯಾಲಯಗಳ ನ್ಯಾಯಾಧೀಶರಾದ ರಮೇಶ ಗಾಣಿಗೇರ, ಶ್ರೀದೇವಿ ದರಬಾರೆ, ನಾಗೇಶ ಪಾಟೀಲ್ ಮಾತನಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.