Site icon Vistara News

Koppala News: ದಸರಾ ಮಾತ್ರವಲ್ಲ, ಕನ್ನಡ ತಾಯಿ ಭುವನೇಶ್ವರಿ ಮೂಲ ಹಂಪಿ: ಶಾಸಕ ಗಾಲಿ ಜನಾರ್ದನ ರೆಡ್ಡಿ

Gangavathi MLA Gali Janardhanareddy talk

ಗಂಗಾವತಿ: ಇಂದು ಮೈಸೂರಿನಲ್ಲಿ (Mysore) ಆಚರಿಸುತ್ತಿರುವ ದಸರಾ (Dussehra) ವಿಶ್ವ ವಿಖ್ಯಾತವಾಗಿರಬಹುದು. ಆದರೆ ದಸರಾ ಮಾತ್ರವಲ್ಲ, ಕನ್ನಡ ತಾಯಿ ಭುವನೇಶ್ವರಿಯ (Bhuvaneshwari) ಮೂಲ ಕೂಡ ಹಂಪಿಯಾಗಿದೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾ ಘಟಕ, ಗಂಗಾವತಿ ತಾಲೂಕು ಘಟಕ ಹಾಗೂ ಸರ್ಕಾರಿ ನೌಕರರ ಸಂಘದಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ, ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಾನದಲ್ಲಿರುವ ಭುವನೇಶ್ವರಿಯೇ ಮೂಲ ಕನ್ನಡ ತಾಯಿ ಎಂದು ತಿಳಿಸಿದರು.

ಇದನ್ನೂ ಓದಿ: Congress Guarantee: ವಿದ್ಯುತ್‌ ಬಳಕೆ ಸರಾಸರಿ ಮೀರಿದರೆ ಎಷ್ಟು ಕಟ್ಟಬೇಕು? ಇಲ್ಲಿದೆ ಸರ್ಕಾರದ ಹೊಸ ನಿಯಮ

ದಸರಾ ಅಂದರೆ ಅದು ನಮ್ಮದು. ಶ್ರೀಕೃಷ್ಣದೇವರಾಯರ ಕಾಲದಲ್ಲಿ ಮಹಾನವಮಿ ದಿಬ್ಬದ ಸಮೀಪ 40 ಸಾವಿರ ಆನೆ, ಎರಡು ಲಕ್ಷ ಕುದುರೆಗಳು ಪ್ರದರ್ಶನದ ಮೂಲಕ ವಿಜಯನಗರದ ಸಾಮ್ರಾಜ್ಯದ ಶಕ್ತಿ ಏನೆಂಬುದನ್ನು ದಸರಾದಲ್ಲಿ ತೋರಿಸುತ್ತಿದ್ದರು. ಈ ಆನೆಗಳ ಮೇಲೆ ತಾಯಿ ಭುವನೇಶ್ವರಿ ದೇವಿಯನ್ನೂ ಕೂರಿಸಿಕೊಂಡು ಮೆರವಣಿಗೆ ಮಾಡಿ ದಸರಾ ಹಬ್ಬವನ್ನು ಮೊದಲಿಗೆ ಆಚರಿಸಿದ್ದು ಹಂಪಿಯಲ್ಲಿ, ವಿಜಯನಗರ ಸಾಮ್ರಾಜ್ಯ ಪತನವಾದ ಬಳಿಕವೇ ಮೈಸೂರಿಗೆ ಈ ದಸರಾ ಉತ್ಸವ ಸ್ಥಳಾಂತರವಾಯಿತು ಎಂದು ಜನಾರ್ದನ ರೆಡ್ಡಿ ಹೇಳಿದರು.

ಹಂಪಿ ಉತ್ಸವ ಹೇಗೆ ಸರ್ಕಾರ ಮಾಡುತ್ತದೆಯೋ ಅದೇ ಮಾದರಿಯಲ್ಲಿ ಆನೆಗೊಂದಿ ಉತ್ಸವ ಮಾಡೋಣ. ಸರ್ಕಾರ ಹಣ ಕೊಡಲಿ ಬಿಡಲಿ. ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಿಸಿ ಇಡೀ ರಾಜ್ಯ ಮತ್ತೆ ಆನೆಗೊಂದಿಯತ್ತ ನೋಡುವಂತೆ ಉತ್ಸವವನ್ನು ಆಚರಣೆ ಮಾಡೋಣ ಎಂದು ಜನಾರ್ದನ ರೆಡ್ಡಿ ಹೇಳಿದರು.

ಇದನ್ನೂ ಓದಿ: Text Book: ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷ ಆಗಲಾರೆ; ಸರ್ಕಾರದ ಆಫರ್‌ ತಿರಸ್ಕರಿಸಿದ ಬರಗೂರು ರಾಮಚಂದ್ರಪ್ಪ

ಈ ಭಾಗದ ಐತಿಹಾಸಿಕ ಸ್ಮಾರಕಗಳ ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅವುಗಳನ್ನು ಆಕರ್ಷಣೀಯವಾಗಿ ಮಾಡಲು ಈ ಹಿಂದೆ ನಾನು ಹಂಪಿಯಲ್ಲಿ ಸೌಂಡ್ ಆ್ಯಂಡ್ ಲೈಟ್, ಹಂಪಿ ಬೈ ನೈಟ್ ಎಂಬ ಯೋಜನೆಗಳನ್ನು ಜಾರಿ ಮಾಡಲಾಗಿತ್ತು. ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ನಲವತ್ತು ತಿಂಗಳಲ್ಲಿ 64 ಬಾರಿ ಹಂಪಿ-ಆನೆಗುಂದಿಗೆ ಭೇಟಿ ನೀಡಿದ್ದೆ. ಅದೇ ಮಾದರಿಯ ಆನೆಗುಂದಿ-ಗಂಗಾವತಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಗುಜರಾತ್ ಮೂಲದ ಒಂದು ಖಾಸಗಿ ಕಂಪನಿಗೆ ಮಾಸ್ಟರ್ ಪ್ಲ್ಯಾನ್ ಮಾಡಿ ಕೊಡಲು ಸೂಚನೆ ನೀಡಲಾಗಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ನಾನು ಶಾಸಕನಾಗಿ ಅಷ್ಟೇ ಅಲ್ಲ, ಪರಿಷತ್ತಿನ ಸದಸ್ಯನಾಗಿ ಎಲ್ಲ ಮಾದರಿಯ ಸಹಕಾರ ನೀಡುತ್ತೇನೆ. ಅದು ನನ್ನ ಜವಾಬ್ದಾರಿ. ಈ ಭಾಗದ ಯುವ ಬರಹಗಾರರು, ಲೇಖಕರ ಕೃತಿಗಳ ಮುದ್ರಣಕ್ಕೆ ಸೂಕ್ತ ಪ್ರೋತ್ಸಾಹ ನೀಡುತ್ತೇನೆ. ಕಸಾಪ ಭವನದ ನವೀಕರಣಕ್ಕೆ ಸರ್ಕಾರದ ಅನುದಾನದಲ್ಲಿ ಸಾಧ್ಯವಾಗದೇ ಹೋದಲ್ಲಿ ವೈಯಕ್ತಿಕ ಅನುದಾನ ನೀಡಿ ಅಭಿವೃದ್ಧಿ ಮಾಡಲಾಗುವುದು ಎಂದರು.

ಇದನ್ನೂ ಓದಿ: Congress Guarantee: ಬಾಡಿಗೆಯವರಿಗೂ ಸಿಗುತ್ತೆ ಫ್ರೀ ಕರೆಂಟ್‌ ಎಂದ ಸರ್ಕಾರ: ಏನೇನು ದಾಖಲೆ ಬೇಕು? ಇಲ್ಲಿದೆ ವಿವರ

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಬಳ್ಳಾರಿ ರಾಘವ, ಬೀಚಿ, ದೇಶಕ್ಕೆ ಮೊದಲ ಮೂಕಿ ಚಿತ್ರ ನೀಡಿರುವ ರಾಧಾಕೃಷ್ಣಮಾಚಾರಿ ಸೇರಿದಂತೆ ಈ ಭಾಗದಲ್ಲಿ ಕವಿಗಳು, ಸಾಹಿತಿ, ಲೇಖಕರು, ಬರಹಾಗರರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಇದೇ ಸಂದರ್ಭದಲ್ಲಿ ಹೇಳಿದರು.

Exit mobile version