Site icon Vistara News

Koppala News : ಸ್ಥಳೀಯವಾಗಿಯೇ ಅಕ್ಕಿ ಖರೀದಿಸಲು ಸಿಎಂ ಬಳಿ ಪ್ರಸ್ತಾಪ: ಸಚಿವ ಶಿವರಾಜ ತಂಗಡಗಿ

Koppal district in-charge minister Shivraj Thangadagi statement at gangavathi

ಗಂಗಾವತಿ: ಅನ್ನಭಾಗ್ಯ ಯೋಜನೆಯಡಿ (Anna bhagya scheme) ವಿತರಿಸುವ ಕೊರತೆ ಪ್ರಮಾಣದ ಅಕ್ಕಿ (Rice) ಸ್ಥಳೀಯವಾಗಿಯೇ ಖರೀದಿಸುವ ಕುರಿತು ಈಗಾಗಲೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ನಾನು ಈ ಬಗ್ಗೆ ಚರ್ಚಿಸಿದ್ದೇವೆ. ಇದನ್ನು ಶೀಘ್ರ ಸಿಎಂ (CM) ಗಮನಕ್ಕೆ ತರುತ್ತೇವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಗಾಗಿ ಹೊರ ರಾಜ್ಯದಿಂದ ಅಕ್ಕಿ ಸಂಗ್ರಹಿಸುವುದಕ್ಕೂ ಸ್ಥಳೀಯವಾಗಿ ಅಕ್ಕಿ ಸಂಗ್ರಹಿಸುವುದಕ್ಕೂ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಗಂಗಾವತಿಯಲ್ಲಿ ಅಕ್ಕಿ ಖರೀದಿಸುವಷ್ಟು ಬೆಲೆ ಸರ್ಕಾರ ನೀಡಲು ಸಾಧ್ಯವಾಗದು.

ಇದನ್ನೂ ಓದಿ: Team India Cricket Schedule 2023: ಟೀಮ್​ ಇಂಡಿಯಾ​ ಕ್ರಿಕೆಟ್​ ಸರಣಿಯ ಸಂಪೂರ್ಣ ವೇಳಾಪಟ್ಟಿ

ಗಂಗಾವತಿಯ ಮಾರುಕಟ್ಟೆಯಲ್ಲಿ ಅಕ್ಕಿ 40ರಿಂದ 45 ರೂಪಾಯಿ ಇದೆ. ಆದರೆ ಅನ್ನಭಾಗ್ಯದಡಿ ಹೊರ ರಾಜ್ಯದಲ್ಲಿ ಖರೀದಿಸುವ ಅಕ್ಕಿಗೆ ಸಾರಿಗೆ ವೆಚ್ಚ ಸೇರಿ 35ರಿಂದ 37 ರೂ. ಇದೆ. ಹೀಗಾಗಿ ಅನ್ನಭಾಗ್ಯದ ಅಕ್ಕಿ ಖರೀದಿಗೆ ಇಂತಿಷ್ಟೆ ಹಣ ಎಂದು ನಿಗದಿಪಡಿಸಲಾಗಿದೆ.

ಹಾಗೊಂದು ವೇಳೆ ಸ್ಥಳೀಯವಾಗಿಯೇ ಅಕ್ಕಿ ಖರೀದಿಗೆ ಅವಕಾಶ ಸಿಕ್ಕರೆ ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಸೋನಾಮಸೂರಿ ಅಕ್ಕಿ ನೀಡಬೇಕು ಎಂಬ ಆಸೆ ನನಗೂ ಇದೆ ಎಂದರು.

ಇದುವರೆಗೂ ರಾಜ್ಯದಲ್ಲಿ ಕೇವಲ ಐದು ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಲಾ ಐದು ಕೆಜಿಗೆ ಎಷ್ಟು ಪ್ರಮಾಣ ಬೇಕೋ ಅಷ್ಟು ಮಾತ್ರ ದಾಸ್ತಾನು ಮಾತ್ರ ಮಾಡಿದ್ದಾರೆ ಎಂದರು.

ಇದನ್ನೂ ಓದಿ: Hair And Skin Care Tips For Monsoon: ಮಳೆಗಾಲದಲ್ಲಿ ಕೂದಲು ಮತ್ತು ತ್ವಚೆಯ ಆರೈಕೆ ಹೇಗೆ?

ಆದರೆ ನಾವು ಜುಲೈ 1ರಿಂದಲೇ ತಲಾ ಹತ್ತು ಕೆಜಿ ಅಕ್ಕಿ ನೀಡಬೇಕಿರುವ ಕಾರಣಕ್ಕೆ ಈಗಿನಿಂದಲೇ ಹೆಚ್ಚುವರಿ ಅಕ್ಕಿಯನ್ನು ಸಂಗ್ರಹಿಸಬೇಕಿದೆ. ಇದಕ್ಕೆ ಬೇಕಾಗುವ ಹೆಚ್ಚುವರಿ ಅಕ್ಕಿ ಸ್ಥಳೀಯವಾಗಿಯೇ ಖರೀದಿಸುವ ಸಂಬಂಧ ಈಗಾಗಲೆ ಚರ್ಚೆ ನಡೆದಿದೆ. ಸಚಿವ ಮುನಿಯಪ್ಪ ಅವರೊಂದಿಗೂ ಈ ಬಗ್ಗೆ ಮಾತನಾಡಿದ್ದೇನೆ ಎಂದು ತಂಗಡಗಿ ಹೇಳಿದರು.

ಇನ್ನು ರಾಜ್ಯ ಸರ್ಕಾರದ ನಿಗಮ ಮಂಡಳಿ, ಪ್ರಾಧಿಕಾರದಲ್ಲಿ ಪಕ್ಷಕ್ಕೆ ಪ್ರಮಾಣಿಕವಾಗಿ ಕೆಲಸ ಮಾಡಿದ ಮತ್ತು ನಿಷ್ಟಾವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಚರ್ಚೆ ಈಗಾಗಲೇ ಸರ್ಕಾರ ನಡೆಸಿದೆ.

ಇದನ್ನೂ ಓದಿ: ಎರಡು ಚೂರಾಗಿ ಒಡೆದು, ಮುಳುಗಿದ ಬೋಟ್​​; ಮದುವೆಯಿಂದ ಬರುತ್ತಿದ್ದ 103 ಜನರ ದುರ್ಮರಣ

ಈ ಸಂಬಂಧ ಕೊಪ್ಪಳ ಜಿಲ್ಲೆಯ ಮುಖ್ಯವಾಗಿ ಗಂಗಾವತಿ-ಕನಕಗಿರಿ ಭಾಗದ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲಾಗುವುದು. ಯಾರಿಗೆ ಏನು ಅವಕಾಶ ನೀಡಬೇಕು ಎಂಬುವುದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಅದಕ್ಕೆ ಸಿಎಂ ಅಂಕಿತ ಹಾಕುತ್ತಾರೆ. ಯಾರಿಗೆ ಯಾವ ಸ್ಥಾನ ಎಂಬುದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಲಾಗದು. ಅದು ಪಕ್ಷದ ಮತ್ತು ಸರ್ಕಾರದ ಆಂತರಿಕ ವಿಚಾರ ಎಂದು ಸಚಿವ ಶಿವರಾಜ ತಂಗಡಗಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Exit mobile version