Site icon Vistara News

Koppala News: ನವಲಿ ಗ್ರಾಮದ ಕೆರೆ ಪುನಶ್ಚೇತನಗೊಳಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

Revival of Navali village lake by Dharmasthala village Development Scheme at koppal

ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಶ್ರೀ ಭೋಗಪುರೇಶ ದೇವಸ್ಥಾನ ಹತ್ತಿರದ ಕೆರೆಯನ್ನು (Lake) ಪುನಶ್ಚೇತನಗೊಳಿಸಲಾಗಿದ್ದು,, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರ ಆರ್ಥಿಕ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ ನೂತನ ಕೆರೆಯ ಸುತ್ತ ಬುಧವಾರ ಸಸಿಗಳನ್ನು ನಾಟಿ ಮಾಡುವುದರೊಂದಿಗೆ ನಾಮಫಲಕ ಅನಾವರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಬಡತನ ನಿರ್ಮೂಲನೆಗಾಗಿ ಸಾಕಷ್ಟು ಪ್ರಯತ್ನದೊಂದಿಗೆ, ಸಾವಿರಾರು ಬಡ ಜನರಿಗೆ ಸಂಸ್ಥೆ ಆಸರೆಯಾಗಿದೆ ಎಂದರು.

ಸಂಸ್ಥೆಯು ಸಾಮಾಜಿಕ ಸೇವೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇದಕ್ಕೆ ಕಾರಣ ಸಂಸ್ಥೆಯಲ್ಲಿ ಶ್ರದ್ಧೆ ಹಾಗೂ ನಂಬಿಕೆಯಿಂದ ದುಡಿಯುತ್ತಿರುವ ಕೆಲಸಗಾರರು ಹಾಗೂ ಸಂಸ್ಥೆಯ ಮೇಲೆ ಜನತೆಯು ಇಟ್ಟಿರುವ ವಿಶ್ವಾಸದಿಂದ ಎಂದರು. ಇದೇ ವೇಳೆ ಕೆರೆಯ ಪುನಶ್ಚೇತನ ಕಾರ್ಯಕ್ಕೆ ಸಹಕರಿಸಿದ ಕೆರೆ ಅಭಿವೃದ್ಧಿ ಸಮಿತಿ ಹಾಗೂ ನವಲಿ ಗ್ರಾಮ ಪಂಚಾಯತಿ ಆಡಳಿತ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: INDW vs BANW 3rd T20: ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಾಂಗ್ಲಾದೇಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವರಿಂದ ಪುನಶ್ಚೇತನಗೊಂಡ ಕೆರೆಯ ನಿರ್ವಹಣೆ ಜವಾಬ್ದಾರಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕೆರೆ ಅಭಿವೃದ್ಧಿ ಸಮಿತಿಗೆ ಒಪ್ಪಿಸಲಾಯಿತು.

ಇದನ್ನೂ ಓದಿ: Mid Season Sale: ಮಿಡ್‌ ಸೀಸನ್‌ ಸೇಲ್‌ನಲ್ಲಿ ಶಾಪಿಂಗ್‌ಗೂ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಿಂಪಲ್‌ ಸಂಗತಿಗಳು

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಕಾಂತಪ್ಪ ಎಂ ಕೆ, ನವಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿರುಪಣ್ಣ ಕಲ್ಲೂರು, ನಿಂಗಪ್ಪ ನಾಯಕ, ಬಿಮನಾಯಕ ಹರ್ಲಪೂರ, ಕಾಡನಾಗೌಡ ಖ್ಯಾಡೆದ, ನಿಲಪ್ಪ ಶಿಕ್ಷಕರು, ಶಿವರೆಡ್ಡಿ ಕ್ಯಾಡೆದ ಇನ್ನಿತರ ಊರಿನ ಮಖಂಡರು ಹಾಗೂ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಮೇಲ್ವಿಚಾರಕರು, ವಲಯ ಮೇಲ್ವಿಚಾರಕರು ಸೇವಪ್ರತಿನಿದಿಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

Exit mobile version