Site icon Vistara News

Koppala News: 405 ಫಲಾನುಭವಿಗಳ ಮಾಹಿತಿ ನ್ಯಾಯಾಲಯಕ್ಕೆ ತಕ್ಷಣ ಸಲ್ಲಿಸಿ: ಶಾಸಕ ಜಿ. ಜನಾರ್ದನರೆಡ್ಡಿ ಸೂಚನೆ

Shelter Committee Meeting by MLA Janardhana Reddy at Gangavathi

ಗಂಗಾವತಿ: ಕಳೆದ ಎರಡು ದಶಕದಿಂದ (Two decades) ನನೆಗುದಿಗೆ ಬಿದ್ದಿರುವ ಹೊಸಳ್ಳಿ ರಸ್ತೆಯಲ್ಲಿನ ಆಶ್ರಯ ಯೋಜನೆಯಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ತ್ವರಿತವಾಗಿ (Quickly) ಕೈಗೆತ್ತಿಕೊಳ್ಳಬೇಕು ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಆಶ್ರಯ ಸಮಿತಿ ಸಭೆ ನಡೆಸಿದ ಶಾಸಕ ಜನಾರ್ದನರೆಡ್ಡಿ, ಕಳೆದ ಎರಡು ದಶಕದಿಂದ ಹೊಸಳ್ಳಿಯ ಆಶ್ರಯ ಯೋಜನೆಯಲ್ಲಿನ ನಿವೇಶನಗಳ ಹಂಚಿಕೆ ನನೆಗುದಿಗೆ ಬಿದ್ದಿದೆ.

ಇದನ್ನೂ ಓದಿ: Atiq Ahmed: ಅತೀಕ್‌, ಅಶ್ರಫ್‌ ಹತ್ಯೆ; ಅಯೋಧ್ಯೆಯಲ್ಲಿ ಅಲರ್ಟ್‌, ಯೋಗಿಯ ಎಲ್ಲ ಕಾರ್ಯಕ್ರಮ ರದ್ದು

ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಆಶ್ರಯ ನಿವೇಶನದ ಹಂಚಿಕೆ ಸಂಬಂಧ ಅನಗತ್ಯವಾಗಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಇದರಿಂದ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ವಿಳಂಬವಾಗಿದೆ.

ಇನ್ನು ಮುಂದೆ ನನ್ನ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ, ಕೆಲಸಗಳು ವಿಳಂಬವಾಗಬಾರದು. ಈ ಕೂಡಲೆ ಹೊಸಳ್ಳಿಯ ಆಶ್ರಯ ಯೋಜನೆಯಲ್ಲಿನ 510 ನಿವೇಶನಗಳ ಪೈಕಿ ಆಯ್ಕೆ ಮಾಡಿರುವ 405 ಫಲಾನುಭವಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಶಾಸಕ ರೆಡ್ಡಿ, ಪೌರಾಯುಕ್ತ ವಿರೂಪಾಕ್ಷ ಮೂರ್ತಿಗೆ ಸೂಚನೆ ನೀಡಿದರು.

ವಾಜಪೇಯಿ ಮತ್ತು ಅಂಬೇಡ್ಕರ್ ಹೌಸಿಂಗ್ ಯೋಜನೆಯಲ್ಲಿ 400 ಮನೆಗಳ ಹಂಚಿಕೆಯಾಗಬೇಕಿತ್ತು. ಆದರೆ 135 ಸಾಮಾನ್ಯ ಮತ್ತು 2 ಎಸ್ಟಿ ಸಮುದಾಯದ ಅರ್ಜಿ ಬಂದಿಲ್ಲ. ಹೀಗಾಗಿ ಪೆಂಡಿಂಗ್ ಇದೆ ಎಂದು ಇದೇ ಸಂದರ್ಭದಲ್ಲಿ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಶಾಸಕರ ಗಮನಕ್ಕೆ ತಂದರು.

ಇದನ್ನೂ ಓದಿ: Argentina football Team: ಕೇರಳಕ್ಕೆ ಬರಲಿದೆ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ; ಭಾರತ ವಿರುದ್ಧ ಸೌಹಾರ್ದ ಪಂದ್ಯ

ಕೊಳಚೆ ಮಂಡಳಿಯಿಂದ ನಗರಕ್ಕೆ 800 ಮನೆಗಳು ಮಂಜೂರಾಗಿವೆ. 711 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನು 89 ಫಲಾನುವಿಗಳನ್ನು ಆಯ್ಕೆ ಮಾಡಬೇಕಿದೆ ಎಂದು ಪೌರಾಯುಕ್ತ ಮಾಹಿತಿ ನೀಡಿದರು.

ವಾಜಪೇಯಿ, ಅಂಬೇಡ್ಕರ್ ಮತ್ತು ಕೊಳಚೆ ಮಂಡಳಿಯ ಯೋಜನೆಗೆ ಬೇಕಾಗುವ ಬಾಕಿ ಫಲಾನುಭವಿಗಳ ಆಯ್ಕೆಗೆ ಎರಡು ಮೂರು ದಿನದಲ್ಲಿ ಮತ್ತೆ ಅರ್ಜಿ ಕರೆಯಿರಿ. ಅಲ್ಲದೇ ಕೊಳಚೆ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ಮೊದಲ ಹಂತದ ಮನೆಗಳು ನಿಗಧಿತ ಅವಧಿಯಲ್ಲಿ ಮುಗಿಯಬೇಕು.

ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಎರಡನೇ ಹಂತದ ಮನೆಗಳ ನಿರ್ಮಾಣ ಒಂದು ವಾರದಲ್ಲಿ ಆರಂಭಿಸಬೇಕು ಎಂದು ಶಾಸಕ ಜನಾರ್ದನರೆಡ್ಡಿ, ನಗರಸಭೆ ಹಾಗೂ ತಾಲ್ಲೂಕು ಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: IND vs WI : ಭಾರತ ವಿರುದ್ಧದ ಟೆಸ್ಟ್ ಸರಣಿಗೆ ವಿಂಡೀಸ್​ನ ಪ್ರಮುಖ ಆಟಗಾರರು ಔಟ್​?

ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ ಹಿರೇಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ, ನಗರಸಭೆಯ ವ್ಯವಸ್ಥಾಪಕ ಷಣ್ಮುಖಪ್ಪ, ಎಇಇ ಶಂಕರಗೌಡ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಇದ್ದರು.

Exit mobile version