ಗಂಗಾವತಿ: ಕುರಿ (Sheep) ಮೇಯಿಸುವ ಸಂದರ್ಭದಲ್ಲಿ ರೈಲು ಡಿಕ್ಕಿಯಾಗಿ (Train collision) ಯುವಕನೊಬ್ಬ ಮೃತಪಟ್ಟ ಘಟನೆ ಸೋಮವಾರ ಕಾರಟಗಿ ತಾಲೂಕಿನ ಮಾರುತಿ ಕ್ಯಾಂಪ್ ಬಳಿ ಸಂಭವಿಸಿದೆ.
ಹುಕ್ಕೇರಿ ತಾಲೂಕಿನ ಯಾದಗುಡ್ಡ ಗ್ರಾಮದ ನಿವಾಸಿ ನಿಂಗಪ್ಪ (16) ಮೃತಪಟ್ಟ ಯುವಕನೆಂದು ಗುರುತಿಸಲಾಗಿದೆ.
ಕುರಿ ಮೇಯಿಸುವುದಕ್ಕಾಗಿಯೇ ಹುಕ್ಕೇರಿ ತಾಲೂಕಿನ ಅಮ್ಮಣಗಿ ಮತ್ತು ಯಾದಗುಡ್ಡದ ಹಲವು ಕುಟುಂಬದವರು ದೇವೇಗೌಡ ಬಡಾವಣೆ ಹತ್ತಿರ ಕಳೆದ ಎಂಟ್ಹತ್ತು ದಿನಗಳಿಂದ ಕುರಿಯ ಹಟ್ಟಿಯನ್ನು ಹಾಕಿಕೊಂಡು ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral Video: ಇನ್ನೇನು ಆನೆ ತುಳಿದೇ ಬಿಟ್ಟಿತು ಎನ್ನುವಷ್ಟರಲ್ಲಿ ನಡೆಯಿತು ಪವಾಡ!
ಎಂದಿನಂತೆ ಸೋಮವಾರ ಯುವಕ ನಿಂಗಪ್ಪ ತಮ್ಮ ಕುರಿಗಳೊಂದಿಗೆ ರೈಲ್ವೆ ಹಳಿಯ ಪಕ್ಕದ ಜಮೀನಿನಲ್ಲಿ ಕುರಿಮೇಯಿಸಲು ಹೊಗಿದ್ದಾರೆ. ಆದರೆ, ಇದೇ ವೇಳೆ ಯಶವಂತಪುರ-ಕಾರಟಗಿ ಮಾರ್ಗದ ರೈಲು ಕಾರಟಗಿಯತ್ತ ಹೊರಟಿದೆ.
ಈ ಸಂದರ್ಭದಲ್ಲಿ ರೈಲ್ವೆ ಹಳಿಯ ಮೇಲಿದ್ದ ಕುರಿಗಳನ್ನು ಓಡಿಸುವ ಉದ್ದೇಶಕ್ಕಾಗಿ ರೈಲ್ವೆ ಹಳಿಯ ಪಕ್ಕದಲ್ಲಿಯೇ ಯುವಕ ನಿಂತುಕೊಂಡಿದ್ದ ಎನ್ನಲಾಗಿದೆ. ಈ ವೇಳೆ ವೇಗವಾಗಿ ಹೊರಟಿದ್ದ ರೈಲು ಯುವಕನ ತಲೆಗೆ ಬಡಿದಿದೆ. ತಲೆಗೆ ಬಲವಾದ ಪೆಟ್ಟು ಬಡಿದ ಪರಿಣಾಮ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ದಿಗ್ಗಜರ ನೇತೃತ್ವದಲ್ಲಿ ಗುರು ಪೂರ್ಣಿಮೆ
ಘಟನಾ ಸ್ಥಳಕ್ಕೆ ಗದಗ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.