Site icon Vistara News

Koppala News: ವಿರುಪಾಪುರಗಡ್ಡೆಯಲ್ಲಿ ಜಾನಪದಲೋಕ ಸ್ಥಾಪನೆಗೆ ಸರ್ಕಾರಕ್ಕೆ ಒತ್ತಾಯ

Senior History Researcher Dr Sharanbasappa Kolkara Urge the government to establish Janapada loka

ಗಂಗಾವತಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ (Budget) ಕೊಪ್ಪಳ ಜಿಲ್ಲೆಗೆ (Koppala) ಜಾನಪದ ಲೋಕ ಮಂಜೂರು ಮಾಡಿರುವ ಸಿಎಂ ಸಿದ್ದರಾಮಯ್ಯರ (CM Siddaramaiah) ಕ್ರಮ ಸ್ವಾಗತಾರ್ಹ. ಆದರೆ ಈ ಉದ್ದೇಶಿತ ಯೋಜನೆ ಗಂಗಾವತಿ (Gangavati) ತಾಲೂಕಿನಲ್ಲಿ ಸ್ಥಾಪಿಸಬೇಕು ಎಂದು ಹಿರಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಡಾ. ಶರಣಬಸಪ್ಪ ಕೊಲ್ಕಾರ ಅವರು, ಬಜೆಟ್‌ನಲ್ಲಿ ಘೋಷಣೆಯಾಗಿರುವ ಜಾನಪದ ಲೋಕವು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸಮೀಪ ಇರುವ ವಿರುಪಾಪುರ ಗಡ್ಡೆಯಲ್ಲಿಯೇ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಯೋಜಿತ ಜಾನಪದ ಲೋಕವನ್ನು ಪ್ರಾಗೈತಿಹಾಸಿಕ, ಚಾರಿತ್ರಿಕ, ಪೌರಾಣಿಕವಾಗಿ ಸಮೃದ್ಧ ಪರಂಪರೆ ಹೊಂದಿರುವ ಆನೆಗೊಂದಿ ಭಾಗದಲ್ಲಿ ಸ್ಥಾಪಿಸುವುದು ಸಮಂಜಸವಾಗಿದೆ.

ಇದನ್ನೂ ಓದಿ: Gruhajyoti Scheme : ಉಚಿತ ವಿದ್ಯುತ್‌ ನೋಂದಣಿಗೆ ಯಾಕಿಷ್ಟು ನಿರಾಸಕ್ತಿ? Offer Closes soon!

ವಿಶ್ವ ಪರಂಪರೆಯ ತಾಣವಾದ ಹಂಪಿಯ ಒಂದು ಭಾಗವೇ ಆನೆಗೊಂದಿ ಪ್ರದೇಶವಾಗಿದೆ. ಪೌರಾಣಿಕವಾಗಿ ಪಂಪ ಕ್ಷೇತ್ರವೆಂದು, ರಾಮಾಯಣ ಮಹಾಕಾವ್ಯದ ಕಿಷ್ಕಿಂಧಾ ರಾಜ್ಯವೆಂದು ಪ್ರಸಿದ್ಧವಾಗಿದೆ. ಇಲ್ಲಿಯೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಇದ್ದು, ಇದೀಗ ಭಾರತದಾದ್ಯಂತ ಅತ್ಯಂತ ಪ್ರಖ್ಯಾತಿ ಪಡೆದಿದೆ.

ವಿಜಯನಗರ ಸಾಮ್ರಾಜ್ಯದ ಮಾತೃಸ್ಥಾನವು ಕೂಡ ಈ ಆನೆಗುಂದಿಯೇ ಆಗಿತ್ತು ಎಂಬುವುದು ಇತಿಹಾಸದಿಂದ ವೇದ್ಯವಾಗುತ್ತದೆ. ಇಲ್ಲಿಯ ಹಿರೇಬೆಣಕಲ್ ಸಹಿತ ಸುತ್ತಮುತ್ತಲು ಅನೇಕ ಪ್ರಾಚೀನ ಮಾನವನ ಅವಶೇಷ, ಸಾವಿರಾರು ಶಿಲಾಯುಗದ ಗವಿಚಿತ್ರ ಇವೆ. ಆನೆಗೊಂದಿಯು ಚಾರಿತ್ರಿಕ ಕಾಲದ ಕೋಟೆ ಕೊತ್ತಲ, ದೇವಾಲಯ, ಮಂಟಪ, ಸ್ಮಾರಕ, ಶಿಲ್ಪಗಳಿಂದ ಈ ಪ್ರದೇಶ ಸಮೃದ್ಧವಾಗಿದೆ.

ಇದನ್ನೂ ಓದಿ: Weather Report : ರಾಜ್ಯದ ಈ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ತುಂಗಭದ್ರಾ ನದಿ ಪರಿಸರದ ಈ ಪ್ರದೇಶ ನಿಸರ್ಗ ಸೊಬಗಿನಿಂದ, ಬೆಟ್ಟಗುಡ್ಡಗಳಿಂದ ಕೂಡಿದ್ದು, ಪ್ರಾಕೃತಿಕವಾಗಿ ಅತ್ಯಂತ ರೋಚಕ-ರಮಣೀಯವಾಗಿದೆ. ಇಲ್ಲಿ ಅನೇಕ ಪ್ರಕಾರದ ಜಾನಪದ ಪರಂಪರೆ ಇನ್ನೂ ಜೀವಂತವಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಆನೆಗುಂದಿ ಭಾಗದ ವಿರುಪಾಪುರಗಡ್ಡೆಯಲ್ಲಿಯೇ ಜಾನಪದಲೋಕ ಸ್ಥಾಪಿಸಬೇಕು. ಸರ್ಕಾರಕ್ಕೆ ಅಗತ್ಯವಾಗುವ ಸುಮಾರು 300 ಎಕರೆಯಷ್ಟು ವಿಶಾಲ ಜಮೀನು ಲಭ್ಯವಿದೆ. ಅದನ್ನು ಬಳಸಿಕೊಂಡು ಸುಂದರ ಜಾನಪದ ಲೋಕ ನಿರ್ಮಿಸಬಹುದು.

ಇದರಿಂದ ಅಂಜನಾದ್ರಿ ಆನೆಗೊಂದಿ ಭಾಗಕ್ಕೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರಿಗೆ ನಮ್ಮ ನಾಡಿನ ಜಾನಪದ ಪರಂಪರೆ ಪರಿಚಯಿಸಲು ಅವಕಾಶ ಸಿಗಲಿದೆ. ಈ ಬಗ್ಗೆ ಸರ್ಕಾರ ಆಸಕ್ತಿ ವಹಿಸಬೇಕು.

ಇದನ್ನೂ ಓದಿ: Rafale M Fighters: ಫ್ರಾನ್ಸ್‌ನಿಂದ 26 ರಫೇಲ್‌ ಎಂ ಯುದ್ಧವಿಮಾನ ಖರೀದಿ; ನೌಕಾಪಡೆಗೆ ಶೀಘ್ರವೇ ಭೀಮಬಲ

ಜಿಲ್ಲಾಡಳಿತ ವಿರುಪಾಪುರ ಗಡ್ಡೆಯಲ್ಲಿ ಜಾನಪದ ಲೋಕವನ್ನು ಸ್ಥಾಪಿಸಲು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಗಂಗಾವತಿ ಶಾಸಕ ಜಿ. ಜನರ್ದನರೆಡ್ಡಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕೂಡಲೆ ಈ ಬಗ್ಗೆ ಗಮನ ಹರಿಸಿ ಆಸಕ್ತಿ ವಹಿಸಬೇಕು ಎಂದು ಹಿರಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ್ ಒತ್ತಾಯಿಸಿದ್ದಾರೆ.

Exit mobile version