ಗಂಗಾವತಿ: ತುಂಗಭದ್ರಾ ಜಲಾಶಯದಿಂದ (Tungabhadra Reservoir) ಎಡದಂಡೆ ಕಾಲುವೆಗೆ (canal) ನೀರು ಹರಿಸಿ ಮೂರು ವಾರ ಕಳೆದರೂ ಇನ್ನು ರಾಯಚೂರು (Raichur) ಭಾಗಕ್ಕೆ ನೀರು (Water) ತಲುಪದ ಹಿನ್ನಲೆ ವಾಸ್ತವ ಪರಿಶೀಲನೆಗೆ (Inspection) ಸ್ವತಃ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಶುಕ್ರವಾರ ಗಂಗಾವತಿಗೆ ಭೇಟಿ ನೀಡಿದರು.
ಎಡದಂಡೆ ಮೇಲ್ಭಾಗದಲ್ಲಿ ನೀರುಕಳ್ಳತನ ಮಾಡುತ್ತಿರುವ ಪರಿಣಾಮ ಇದುವರೆಗೂ ರಾಯಚೂರು ಟೇಲ್ಯಾಂಡ್‌ವರೆಗೂ ನೀರು ಸಿಕ್ಕಿಲ್ಲ ಎಂಬ ರೈತರು ಹಾಗೂ ಸಂಘಟನೆಗಳ ಒತ್ತಾಯದ ಹಿನ್ನಲೆಯಲ್ಲಿ ಸಚಿವ ಭೋಸರಾಜುಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಈ ಹಿನ್ನಲೆಯಲ್ಲಿ ಮುನಿರಾಬಾದ್‌ನ ಕಾಡಾ ಕಚೇರಿಗೆ ಮೊದಲು ಭೇಟಿ ನೀಡಿದ ಸಚಿವ ಭೋಸರಾಜು, ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮುನಿರಬಾದ್‌ನಿಂದಲೇ ತುಂಗಭದ್ರಾ ಎಡದಂಡೆ ಕಾಲುವೆಯ ಮಣ್ಣಿನ ರಸ್ತೆಯಲ್ಲಿ ಸಂಚರಿಸಿ ವಸ್ತು ಸ್ಥಿತಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: Chandrayaan -3 : ರೋವರ್ ಚಂದ್ರನ ಮೇಲೆ ಅನ್ವೇಷಣೆ ಮಾಡಲು ಹೊರಟ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ
ಕಾಲುವೆಯ ಯಾವ ಮೈಲ್‌ನಲ್ಲಿ ಎಷ್ಟು ಪ್ರಮಾಣ ನೀರು ಹರಿಸಬೇಕು ಎಂಬುವುದರ ಬಗ್ಗೆ ಈಗಾಗಲೆ ಇಲಾಖೆಯಿಂದಲೇ ಗೇಜ್ ಪಾಯಿಂಟ್ ನಿಗಧಿಯಾಗಿದೆ. ಎಲ್ಲಾ ತಾಲೂಕಿನ ಅಧಿಕಾರಿಗಳು ಕಡ್ಡಾಯವಾಗಿ ನೀರಿನ ಗೇಜ್ ನಿರ್ವಹಿಸಬೇಕು.
ಇದರಿಂದ ರಾಯಚೂರುವರೆಗೂ ನೀರು ತಲುಪಲು ಸಾಧ್ಯವಾಗಲಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಕಾಲುವೆ ಮೇಲ್ಬಾಗದಲ್ಲಿ ಗಸ್ತು ತಿರುಗಬೇಕು. ಗೇಜ್ ಪಾಯಿಂಟ್ ಕಾಯ್ದುಕೊಳ್ಳದ ವಿಭಾಗದಲ್ಲಿನ ಎಲ್ಲಾ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಭೋಸರಾಜು ತಾಕೀತು ಮಾಡಿದರು.
ಲಭ್ಯ ಇರುವ ನೀರಿನ ಪ್ರಮಾಣದಲ್ಲಿಯೇ ಎಲ್ಲಾ ಕಡೆ ಗೇಜ್ ನಿರ್ವಹಿಸಬೇಕು. ಒಂದೊಮ್ಮೆ ಅಧಿಕಾರಿಗಳು ಹೆಚ್ಚಿನ ನೀರು ಬಿಟ್ಟರೆ ಓವರ್ ಫ್ಲೋ ಆಗಿ ನೀರು ವ್ಯರ್ಥವಾಗುತ್ತದೆ. ಹೀಗಾಗಿ ಇರುವ ಪ್ರಮಾಣದಲ್ಲಿಯೇ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: Asia Cup 2023: ಯೋ-ಯೋ ಟೆಸ್ಟ್ ಪಾಸ್ ಆದ ನಾಯಕ ರೋಹಿತ್,ಹಾರ್ದಿಕ್
ರಾತ್ರಿ ಗಸ್ತು ತಿರಗಬೇಕು ಎಂದು ಈಗಾಗಲೆ ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.