Site icon Vistara News

Koppala News: ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಕೊಪ್ಪಳದ ವಾಸವಿ ಶಾಲೆಯಲ್ಲಿ ಯೋಗ ದಿನಾಚರಣೆ

Yoga Day Celebration at Vasavi School Koppala

ಕೊಪ್ಪಳ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ (Health) ಪ್ರತಿಯೊಬ್ಬರೂ ಯೋಗವನ್ನು (Yoga) ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳದ ವಾಸವಿ ಶಾಲೆ, ಕಿಂಗ್ ಮೌರ್ಯಾಸ್ ಶಾಲೆಯ ಮುಖ್ಯಸ್ಥ ಫಕೀರೇಶ್‌ ಎಮ್ಮಿಯವರ್ ಹೇಳಿದರು.

ವಿಸ್ತಾರ ನ್ಯೂಸ್ ಸಹಯೋಗದಲ್ಲಿ ವಾಸವಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Weather Report: ಇನ್ನು ನಾಲ್ಕು ದಿನ ಭಯಂಕರ ಮಳೆ; 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌!

ಪ್ರಸ್ತುತ ದಿನಗಳಲ್ಲಿ ಆರೋಗ್ಯವೇ ಸಂಪತ್ತು, ಆರೋಗ್ಯವೇ ಮುಖ್ಯ. ಹೀಗಾಗಿ ಹಿರಿಯರು ಆರೋಗ್ಯವೇ ಭಾಗ್ಯ ಎಂದು ಹೇಳಿದ್ದಾರೆ, ನಮ್ಮ ದೇಹ ಆರೋಗ್ಯವಾಗಿರಬೇಕು ಎಂದರೆ ಯೋಗವನ್ನು ಮಾಡಬೇಕು ಎಂದು ತಿಳಿಸಿದರು.

ಯಾವ ಆಸನ ಮಾಡಿದರೆ ಯಾವ ಕಾಯಿಲೆಗೆ ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿದುಕೊಳ್ಳಬೇಕು ಬದುಕಿನಲ್ಲಿ ಯೋಗ ಅಳವಡಿಸಿಕೊಂಡು ನಮ್ಮ ಅನೇಕ ಹಿರಿಯರು ಆರೋಗ್ಯವಾಗಿ, ಲವಲವಿಕೆಯಿಂದ ಇರುವುದನ್ನು ನಾವು ನೋಡಿದ್ದೇವೆ. ನಮ್ಮ ದೇಶದಲ್ಲಿ ಹುಟ್ಟಿರುವ ಯೋಗವನ್ನು ನಾವೇ ಅರ್ಥ ಮಾಡಿಕೊಂಡಿಲ್ಲ ಎಂಬುದೇ ದುರಂತ, ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿದೆ. ಹೀಗಾಗಿ ಎಲ್ಲರೂ ಯೋಗವನ್ನು ಅಳವಡಿಸಿಕೊಂಡು ನಿರೋಗಿಗಳಾಗಿ ಎಂದರು.

ಯೋಗ ತರಬೇತುದಾರ ಭೋಜಣ್ಣ ಪೂಜಾರ ಮಾತನಾಡಿ, ಯೋಗದ 8 ಸೂತ್ರಗಳು. ಅವುಗಳಲ್ಲಿ ಮೂರು ಸೂತ್ರಗಳನ್ನಾದರೂ ಅಳವಡಿಸಿಕೊಳ್ಳಬೇಕು. ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ಮಾಡುವುದರಿಂದ ನಿರೋಗಿಗಳಾಗಬೇಕು. ಯೋಗವನ್ನು ಒಂದೇ ದಿನಕ್ಕೆ ಮೀಸಲಾಗಿಸದೆ‌ ನಿತ್ಯವೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Joe Biden: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಗ ತೆರಿಗೆ ಕಳ್ಳ, ಮಾದಕ ವ್ಯಸನಿ‌, ಅಕ್ರಮ ಗನ್ ಮಾಲೀಕ!

ಬಳಿಕ ಶಾಲಾ ಮಕ್ಕಳಿಗೆ ವಿವಿಧ ಆಸನವನ್ನು ಪ್ರದರ್ಶನ ಮಾಡುವುದರ ಜತೆಗೆ ಅವುಗಳ ಮಹತ್ವವನ್ನು ಯೋಗ ತರಬೇತುದಾರ ಭೋಜಣ್ಣ ಪೂಜಾರ ಅವರು ತಿಳಿಸಿದರು.

Exit mobile version