ಗಂಗಾವತಿ: ಗಂಗಾವತಿ ಮತ್ತು ಶ್ರೀರಾಮನಗರದಲ್ಲಿರುವ ವಿದ್ಯಾನಿಕೇತನ ಪಿಯು ಕಾಲೇಜುಗಳ ಒಟ್ಟು 1457 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ.100 ರಷ್ಟು ಫಲಿತಾಂಶ ಬಂದಿದ್ದು, ವಿದ್ಯಾರ್ಥಿನಿ ಕಾವ್ಯ 600ಕ್ಕೆ 593 ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದಿದ್ದಾಳೆ ಎಂದು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಸೂರಿಬಾಬು (2nd PUC Result) ತಿಳಿಸಿದರು.
ವಡ್ಡರಹಟ್ಟಿಯಲ್ಲಿರುವ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಶ್ರೀರಾಮನಗರಲ್ಲಿರುವ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಾವ್ಯ 600ಕ್ಕೆ 593 ಅಂಕಗಳನ್ನು ಪಡೆದು ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದಿದ್ದಾಳೆ ಎಂದು ತಿಳಿಸಿದ ಅವರು, ಗಂಗಾವತಿ ಮತ್ತು ಶ್ರೀರಾಮನಗರದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಒಟ್ಟು 1457 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ.100 ರಷ್ಟು ಫಲಿತಾಂಶ ಬಂದಿದೆ.
ಈ ಪೈಕಿ 1120 ವಿದ್ಯಾರ್ಥಿಗಳು ಅಗ್ರ ಶ್ರೇಯಾಂಕದಲ್ಲಿ, ಆರು ಮಕ್ಕಳು 600 ಕ್ಕೆ 590 ಅಂಕ, 156 ವಿದ್ಯಾರ್ಥಿಗಳು 580 ಕ್ಕೂ ಹೆಚ್ಚು ಅಂಕ ಪಡೆದುಕೊಂಡು ಇಡೀ ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Karnataka Weather: ಚಿಕ್ಕಮಗಳೂರಲ್ಲಿ ವರುಣನ ಅಬ್ಬರ; ರಾಜ್ಯದಲ್ಲಿ ನಾಳೆ ಗುಡುಗು, ಸಿಡಿಲು ಸಹಿತ ಮಳೆ
ಒಂದು ಲಕ್ಷ ನಗದು ಹಣ
ದ್ವಿತೀಯ ಪಿಯುಸಿಯಲ್ಲಿ 590ಕ್ಕೂ ಅಧಿಕ ಅಂಕಗಳಿಸುವ ನಮ್ಮ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂದು ಒಂದು ಲಕ್ಷ ರೂಪಾಯಿ ಪ್ರೋತ್ಸಾಹದ ರೂಪದಲ್ಲಿ ನೀಡುವ ಯೋಜನೆಯನ್ನು ಈ ವರ್ಷವೂ ಮುಂದುವರೆಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: FD interest rate: ಬಜಾಜ್ ಫೈನಾನ್ಸ್ ಹೆಚ್ಚಿನ ಅವಧಿಯ ಸ್ಥಿರ ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ
ಬಡ, ಮಧ್ಯಮ, ರೈತ, ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಂತಹ ಮುಖ್ಯ ವಾಹಿನಿಗೆ ಬರಬೇಕು ಎಂಬ ಸಾಮಾಜಿಕ ಜವಾಬ್ದಾರಿಯ ಉದ್ದೇಶಕ್ಕೆ ಕಳೆದ ಹಲವು ವರ್ಷದಿಂದ ಈ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಕೇವಲ 590 ಅಂಕ ಗಳಿಸಿದ ಮಕ್ಕಳಿಗೆ ಮಾತ್ರವಲ್ಲ, 580ಕ್ಕೂ ಅಧಿಕ ಅಂಕ ಗಳಿಸುವ ಮಕ್ಕಳಿಗೆ ತಲಾ 50 ಸಾವಿರ ನಗದು ಹಣ ನೀಡಲಾಗುತ್ತಿದೆ.
ಈ ಬಾರಿ ಸುಮಾರು ಹತ್ತು ಮಕ್ಕಳಿಗೆ ತಲಾ ಒಂದು ಲಕ್ಷ ಹಾಗೂ 156 ಮಕ್ಕಳಿಗೆ ತಲಾ 50 ಸಾವಿರ ನಗದು ಹಣ ನೀಡಲಾಗುವುದು ಎಂದ ಅವರು, ವಿದ್ಯಾನಿಕೇತನ ಸಂಸ್ಥೆಯು ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿದ್ದು, ಬೆಂಗಳೂರು, ಮೈಸೂರಿನ ಮಕ್ಕಳು ನಮ್ಮ ಕೊಪ್ಪಳದಲ್ಲಿ ಓದುತ್ತಿದ್ದಾರೆ ಎಂದು ಸಂಸತ ವ್ಯಕ್ತಪಡಿಸಿದರು.
ಇದನ್ನೂ ಓದಿ: Virat Kohli: ಸಿಕ್ಸರ್ ಮೂಲಕ ದಾಖಲೆ ಬರೆಯಲು ಸಜ್ಜಾದ ಕಿಂಗ್ ಕೊಹ್ಲಿ
ಈ ವೇಳೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಉಪನ್ಯಾಸಕ ಮಲ್ಲಿಕಾರ್ಜುನ, ಜಗನ್ನಾಥರಾವ್, ಅಭಿಷೇಕ, ವೆಂಕಟಕೃಷ್ಣ, ಉಮಾಶಂಕರ್, ಚಂದ್ರಶೇಖರ್, ಕೃಷ್ಣಪ್ರಸಾದ್, ನಳಿನಿ, ಆದರ್ಶ, ವೆಂಕಟಪತಿರಾಜು, ಬನ್ನು, ಸುಬ್ಬಾರಾವ್, ಇತರರಿದ್ದರು.