ಕೊಪ್ಪಳ: ಅಂಜನಾದ್ರಿಯಲ್ಲಿ ಧರ್ಮ ದಂಗಲ್ ಮುನ್ಸೂಚನೆ ಕಂಡುಬಂದಿದೆ. ಹಿಂದುಗಳ ಪವಿತ್ರ ಕ್ಷೇತ್ರ ಅಂಜನಾದ್ರಿಯಲ್ಲಿ (Anjanadri Hill) ಹಿಂದುಗಳಿಗೆ ಹೊರತುಪಡಿಸಿ ಅನ್ಯ ಧರ್ಮೀಯರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಹಿಂದು ಜಾಗರಣಾ ವೇದಿಕೆಯಿಂದ ಗಂಗಾವತಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಹಿಂದುಗಳ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಡಿಸೆಂಬರ್ 3, 4 ಹಾಗೂ 5 ರಂದು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯುತ್ತದೆ. ಹೀಗಾಗಿ ಅಂಜನಾದ್ರಿಗೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ, ವ್ಯಾಪಾರ ವಹಿವಾಟು ನಡೆಸುವ ನೆಪದಲ್ಲಿ ಮುಸ್ಲಿಂ ಉಗ್ರರು ಧಾರ್ಮಿಕ ಕ್ಷೇತ್ರಗಳಿಗೆ ಲಗ್ಗೆ ಹಾಕಿ ಆತಂಕ ಮೂಡಿಸುತ್ತಿದ್ದಾರೆ. ಹೀಗಾಗಿ ಅನ್ಯ ಧರ್ಮದ ವ್ಯಾಪಾರಿಗಳಿಗೆ ಕ್ಷೇತ್ರದಲ್ಲಿ ಅನುಮತಿ ನೀಡಬಾರದು ಎಂದು ಕಾರ್ಯಕರ್ತರು ಕೋರಿದ್ದಾರೆ.
ಅಂಜನಾದ್ರಿ ಪರ್ವತದ ಸುತ್ತಮುತ್ತ ಹಿಂದುಗಳ ಹೊರತಾಗಿ ಅನ್ಯಧರ್ಮೀಯರಿಗೆ ಪೂಜೆ ಸಾಮಗ್ರಿ, ಹೋಟೆಲ್ ಸೇರಿ ಯಾವುದೇ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಬಾರದು. ಒಂದು ವೇಳೆ ಮುಸ್ಲಿಂ ಹಾಗೂ ಕ್ರೈಸ್ತರಿಗೆ ವ್ಯಾಪಾರಕ್ಕೆ ಅವಕಾಶ ನೀಡಿದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹಿಂದು ಜಾಗರಣಾ ವೇದಿಕೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ | Karnataka election | ಸಿದ್ದರಾಮಯ್ಯ – ಡಿಕೆಶಿ ಜೋಡೆತ್ತುಗಳಲ್ಲ, ಕಿತ್ತಾಡುವ ಚಿರತೆಗಳು ಎಂದ ಶ್ರೀರಾಮುಲು