Site icon Vistara News

Anjanadri Hill | ಅಂಜನಾದ್ರಿಯಲ್ಲಿ ಪೂಜೆಗೆ ಅವಕಾಶ ನೀಡದೆ ಕೋರ್ಟ್‌ ಆದೇಶ ಉಲ್ಲಂಘನೆ: ಅರ್ಚಕ ವಿದ್ಯಾದಾಸ ಬಾಬಾ ದೂರು

Anjanadri Hill

ಕೊಪ್ಪಳ: ಹೈಕೋರ್ಟ್‌ ನನಗೆ ಅಂಜನಾದ್ರಿಯಲ್ಲಿ (Anjanadri Hill) ಆಂಜನೇಯನ ಪೂಜೆಗೆ ಅವಕಾಶ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 9 ಗಂಟೆಯವರೆಗೂ ಅಂಜನಾದ್ರಿಯಲ್ಲಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಸೂಚನೆ ನೀಡಿದೆ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆಗಮಿಸಿದಾಗ ನನಗೆ ಪೂಜೆಗೆ ಅವಕಾಶ ನೀಡಿಲ್ಲ. ಇದು ನ್ಯಾಯಾಲಯದ ಆದೇಶ ಉಲ್ಲಂಘನೆ ಎಂದು ಅಂಜನಾದ್ರಿ ಪರ್ವತದ ಅರ್ಚಕ ವಿದ್ಯಾದಾಸ ಬಾಬಾ ಹೇಳಿದ್ದಾರೆ.

ರಾಜ್ಯಪಾಲರು ಅಂಜನಾದ್ರಿಗೆ ಬಂದಾಗ ಪೂಜೆಗೆ ಅವಕಾಶ ನೀಡದ ಬಗ್ಗೆ ಗಂಗಾವತಿಯಲ್ಲಿ ಪ್ರತಿಕ್ರಿಯಿಸಿ, 2 ವರ್ಷಗಳ ಹಿಂದೆಯೇ ನನಗೆ ಪೂಜೆಗೆ ಅವಕಾಶ ನೀಡಲಾಗಿದೆ. ಶುಕ್ರವಾರ ರಾಜ್ಯಪಾಲರು ಆಗಮಿಸಿದಾಗ ಪೂಜೆ ಅವಕಾಶ ನೀಡಿಲ್ಲ. ಈ ಕುರಿತು ನ್ಯಾಯಾಲಯಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಡಿ.9ರಂದು ಭೇಟಿ ನೀಡಿದ್ದರು. ಈ ವೇಳೆ ವಿದ್ಯಾದಾಸ ಬಾಬಾ ಸ್ಥಳದಲ್ಲಿ ಪೂಜೆ ಸಲ್ಲಿಸಲು ಮುಂದಾದಾಗ ಭದ್ರತೆ ದೃಷ್ಟಿಯಿಂದ ಅವರನ್ನು ತಡೆಯಲಾಗಿತ್ತು. ಆಗ ಅರ್ಚಕ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ | Janardhan Reddy | ಕಲ್ಯಾಣ ರಾಜ್ಯ ಪ್ರಗತಿ‌ ಪಕ್ಷ ಮೂಲಕ ಜನಾರ್ದನ ರೆಡ್ಡಿ ರಾಜಕೀಯ ಮರು ಪ್ರವೇಶ?

Exit mobile version