ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದೇ ಖ್ಯಾತಿಯಾಗಿರುವ, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೆ ಶುರುವಾಗಿದೆ. (Koppal Jatra Mahotsava) ಇಂದು ಸಂಜೆ ಮಹಾ ರಥೋತ್ಸವ ನಡೆಯಲಿದೆ.
ರಥೋತ್ಸವಕ್ಕಾಗಿ ರಥ ಬೀದಿ ಸಿಂಗಾರಗೊಂಡಿದೆ. ರಥ ಬೀದಿಯಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಸುಂದರವಾದ 40ಕ್ಕೂ ಹೆಚ್ಚು ರಂಗೋಲಿಗಳನ್ನು ರಚಿಸಿದ್ದಾರೆ. ಇದೇ ವೇಳೆ ಜಾತ್ರೆಯಲ್ಲಿ ಅಂಗಾಂಗ ದಾನ ಕುರಿತು ಜಾಗೃತಿಯನ್ನೂ ನಡೆಸಲಾಗಿದೆ.
ಗವಿಮಠದತ್ತ ಪಾದಯಾತ್ರೆಯ ಮೂಲಕ ಭಕ್ತಸಾಗರ ಹರಿದು ಬರುತ್ತಿದೆ. ನಗರದ ವಿವಿಧ ರಸ್ತೆಗಳಿಂದ ಪಾದಯಾತ್ರೆ ಮೂಲಕ ಭಕ್ತರು ಬರುತ್ತಿದ್ದಾರೆ. ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕಿನ್ನಾಳ, ಹೂವಿನಾಳ ರಸ್ತೆಗಳ ಮೂಲಕ ಆಗಮಿಸುತ್ತಿದ್ದಾರೆ. ಚಿಕ್ಕ, ಚಿಕ್ಕ ಮಕ್ಕಳು, ಮಹಿಳೆಯರು,ವೃದ್ಧರು ನೆರೆದಿದ್ದಾರೆ. ಪಾದಯಾತ್ರೆಯ ಮಾರ್ಗ ಮದ್ಯೆ ಭಕ್ತರಿಗೆ ನೀರು, ಹಾಲು, ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ.